ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಕೋಟೆಗೆ ಎಂಟ್ರಿ ಕೊಟ್ಟ ಬಿಜೆಪಿ

Promotion

ನವದೆಹಲಿ, ಮೇ 23, 2019 (www.justkannada.in): 2019ರ ಲೋಕಸಭಾ ಚುನಾವಣೆಯ ಮತಎಣಿಕೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಹೊರಬೀಳತೊಡಗಿದೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೋಟೆಗೆ ಬಿಜೆಪಿ ಈ ಬಾರಿ ಲಗ್ಗೆ ಇಟ್ಟಿದೆ. ಸದ್ಯದ ಟ್ರೆಂಡ್ ಪ್ರಕಾರ 42 ಲೋಕಸಭಾ ಸದಸ್ಯ ಬಲದ ಪಶ್ಚಿಮಬಂಗಾಳದಲ್ಲಿ ಟಿಎಂಸಿ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಭಾರತೀಯ ಜನತಾ ಪಕ್ಷ 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಪಕ್ಷ 2 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. 2014ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 34 ಸ್ಥಾನ ಪಡೆದಿದ್ದು, ಸಿಪಿಐ ಕೇವಲ 2 ಸ್ಥಾನ ಗಳಿಸಿತ್ತು.