ನನ್ನ ಪ್ರಕಾರ ಸಿದ್ಧರಾಮಯ್ಯ ವರುಣಾದಲ್ಲೂ ನಿಲ್ಲಲ್ಲ: ನಿಂತ್ರೆ ಸೋಲ್ತಾರೆ- ಸಚಿವ ಆರ್.ಅಶೋಕ್.

Promotion

ಬೆಂಗಳೂರು,ಮಾರ್ಚ್,20,2023(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯರಿಗೆ ಕೋಲಾರದಲ್ಲಿ ಸ್ಪರ್ಧಿಸದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ ಬೆನ್ನಲ್ಲೆ ಈ ಬಗ್ಗೆ ಬಿಜೆಪಿ ನಾಯಕರ ಟೀಕೆಗಳು ಶುರುವಾಗಿದ್ದು ಇದೀಗ ಮತ್ತೆ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್, ನನ್ನ ಪ್ರಕಾರ ಸಿದ್ಧರಾಮಯ್ಯ ವರುಣಾ ಕ್ಷೇತ್ರದಲ್ಲೂ ನಿಲ್ಲಲ್ಲ ಅನ್ನಿಸುತ್ತೆ. ಯಾಕೆಂದರೇ ಅಲ್ಲೂ ಸಿದ್ದರಾಮಯ್ಯ  ಸೋಲುತ್ತಾರೆ ಎಂದು ಭವಿಷ್ಯ ನುಡಿದರು.

ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ಸಲಹೆ  ನೀಡಿದ್ದು, ಸಿದ್ಧರಾಮಯ್ಯ ನೋಡಿ ನನಗೆ ಮರುಕವಾಗ್ತಿದೆ. ಕಳೆದ 6ತಿಂಗಳಿನಿಂದ ಕ್ಷೇತ್ರಕ್ಕಾಗಿ ಸಿದ್ಧರಾಮಯ್ಯ ಓಡಾಡುತ್ತಿದ್ದಾರೆ. ರಾಜ್ಯದ ಯಾವುದೇ ಮೂಲೆಗೆ  ಹೋದರೂ ಕ್ಷೇತ್ರ ಸಿಕ್ಕಿಲ್ಲ ಎಂದು ಟೀಕಿಸಿದರು.

Key words: Siddaramaiah -will -not –contast- Varuna-Minister- R. Ashok.