ಸಿದ್ಧರಾಮಯ್ಯ ಎಲ್ಲೇ ನಿಂತರೂ 50 ಸಾವಿರ ಮತಗಳ ಅಂತರದಿಂದ ಗೆಲುವು- ಎಂ.ಬಿ ಪಾಟೀಲ್.

ಬೆಳಗಾವಿ,ಮಾರ್ಚ್,20,2023(www.justkannada.in): ಸಿದ್ಧರಾಮಯ್ಯ ಎಲ್ಲೇ ನಿಂತರೂ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಬಿಜೆಪಿ ನಾಯಕರ ಟೀಕೆಗೆ ಮಾಜಿ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದರು.

ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧಿಸದಂತೆ ರಾಹುಲ್ ಗಾಂಧಿ ಸಲಹೆ ನಂತರ ಬಿಜೆಪಿ ನಾಯಕರು ಮಾಡಿದ ಟೀಕೆಗಳಿಗೆ ಟಾಂಗ್ ನೀಡಿದ ಎಂ.ಬಿ ಪಾಟೀಲ್,  ಸಿದ್ಧರಾಮಯ್ಯ ಕೋಲಾರ, ವರುಣ, ಬಾದಾಮಿ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ವರುಣಾ ಸಿದ್ದರಾಮಯ್ಯ ಕ್ಷೇತ್ರವೇ ಆಗಿದೆ. ಅವರು ಎಲ್ಲೇ ನಿಂತರೂ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದರು.

ಉರಿಗೌಡ ನಂಜೇಗೌಡ ಸಿನಿಮಾ ನಿರ್ಮಾಣ ಕೈಬಿಟ್ಟ ವಿಚಾರ ಕುರಿತು ಲೇವಡಿ ಮಾಡಿದ ಎಂ.ಬಿ ಪಾಟೀಲ್, ಮಾಡೋದಕ್ಕೆ ಬೇರೆ ಕೆಲಸ ಇಲ್ಲ ಯಾವುದ್ರೀ ಅದು ಉರಿಗೌಡ ನಂಜೇಗೌಡ . ಹೀಗಂತಾ ಬಿಜೆಪಿ ನಾಯಕರೇ ಕಿಡಿಕಾರಿದ್ದಾರೆ. ಬಹುಶಃ ನಿರ್ಮಲಾನಂದನಾಥ ಶ್ರೀಗಳು ಸರಿಯಾಗಿ ಕ್ಲಾಸ್ ತೆಗೆದಕೊಂಡಿರಬೇಕು. ಅದಕ್ಕೆ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎಂದು ಕುಟುಕಿದರು.

Key words: Siddaramaiah – margin of 50 thousand- votes-win- MB Patil.