ಕೆಐಎಬಿಯಲ್ಲಿ ‘ನಾಡಪ್ರಭು ಕೆಂಪೇಗೌಡರ ಪ್ರತಿಮೆ’  ಅನಾವರಣಗೊಳಿಸಿದ ಪ್ರಧಾನಿ ಮೋದಿ

Promotion

ಬೆಂಗಳೂರು,ನವೆಂಬರ್,11,2022(www.justkannada.in): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಾಗಿದ್ದು, ಕೆಂಪೇಗೌಡ ಪ್ರತಿಮೆ ಮತ್ತು ಥೀಮ್ ಪಾರ್ಕ್​ಗೆ ಒಟ್ಟು 84 ಕೋಟಿ ರೂ. ವೆಚ್ಚವಾಗಿದೆ.

ಇಂದು ಪ್ರಧಾನಿ ಮೋದಿ ಕೆಂಪೇಗೌಡರ ಪ್ರತಿಮೆ’  ಅನಾವರಣಗೊಳಿಸಿದ್ದು ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,  ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎ.ನಾರಾಯಣಸ್ವಾಮಿ, ಮಾಜಿ ಸಿಎಂಗಳಾದ ಎಸ್.ಎಂ ಕೃಷ್ಣ, ಬಿಎಸ್ ಯಡಿಯೂರಪ್ಪ ಸೇರಿ ಹಲವರು ಉಪಸ್ಥಿತರಿದ್ದರು.

100 ಟನ್‌ ಕಂಚು ಮತ್ತು 120 ಟನ್ ಉಕ್ಕು ಬಳಕೆ ಮಾಡಿ ಈ ಪ್ರತಿಮೆ ನಿರ್ಮಿಸಲಾಗಿದೆ. ಕೆಂಪೇಗೌಡರ‌ ಖಡ್ಗವೇ ಬರೋಬ್ಬರಿ 4000 ಸಾವಿರ ಕೆಜಿ ತೂಕವಿದೆ.

Key words: PM Modi – Nadaprabhu Kempegowda- statue – KIAB

ENGLISH SUMMARY…

PM Modi unveils ‘Nadaprabhu Kempegowda Statue’ at KIA in Bengaluru
Bengaluru, November 11, 2022 (www.justkannada.in): Prime Minister Narendra Modi today unveiled the 108 ft tall statue of the founder of Bangalore ‘Nadaprabhu Kempegowda’ near the Kempegowda International Airport in Bengaluru today.
A sum of Rs. 84 crore has been spent for the statue and a theme park. Governor of Karnataka Thawar Chand Gehlot, Chief Minister Basavaraj Bommai, Union Ministers Pralhad Joshi, A. Narayanaswamy, former CMs S.M. Krishna, B.S. Yediyurappa and other leaders were present on the occasion.
About 100 tonnes of bronze and 120 metal is used to build the mammoth statue. The sword itself weighs 4,000 kgs.
Keywords: Kempegowda Statue/ KIA/ PM Modi/ unveils