ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ಲಿ ಅಂತಾ ಕೆಲವರು ಚಮಚಾಗಿರಿ ಮಾಡ್ತಿದ್ದಾರೆ: ಎಚ್.ವಿಶ್ವನಾಥ್

Promotion

ಹುಬ್ಬಳ್ಳಿ , ಮೇ 12, 2019 (www.justkannada.in):ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ವಿಚಾರಕ್ಕೆ ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ಲಿ ಅಂತಾ ಕೆಲವರು ಚೆಮಚ್ಕಾಗಿರಿ ಮಾಡ್ತಿದ್ದಾರೆ. ಸಿದ್ದರಾಮಯ್ಯ 5 ವರ್ಷ ಆಡಳಿತ ಮಾಡಿದ್ರು ಏನ್ ಮಾಡಿದ್ರು..?ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ದೇವರಾಜ ಅರಸು ಅವರನ್ನು ಜನ ಈಗಲೂ ನೆನೆಯುತ್ತಾರೆ. ಸಿದ್ದರಾಮಯ್ಯ ಏನು ದೇವರಾಜ ಅರಸು ಕೊಟ್ಟ ರೀತಿ ಆಡಳಿತ ಕೊಟ್ಟಿದ್ದಾರಾ?ಸಿದ್ದರಾಮಯ್ಯ ತನ್ನ ಕಾಲದ ಆಡಳಿತ ಚೆನ್ನಾಗಿತ್ತು. ಐದು ವರ್ಷ ಪೂರೈಸಿದ ಸಿಎಂ ನಾನು ಅಂತಾರೆ. ಆದರೆ ಮತ್ಯಾಕೆ 130 ಇದ್ದ ಸಂಖ್ಯಾಬಲ 78 ಕ್ಕೆ ಇಳಿಯಿತು ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಮತ್ತೆ ಸಿಎಂ ಆಗ್ತೀನಿ ಅಂತಾರೆ. ಸಿದ್ದರಾಮಯ್ಯ ಕೇವಲ ಬಾಯಿ ಚಪಲಕ್ಕೆ ಹಾಗೆ ಮಾತನಾಡೋದು ಅಷ್ಟೇ. ಇನ್ನೂ ನಾಲ್ಕು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರ್ತಾರೆ. ಮತ್ತೆ ಚುನಾವಣೆ ಬಂದಾಗ ನೋಡೋಣ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದನ್ನ ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.