ಹುಲಿಯನ್ನೆ ಅಟ್ಟಾಡಿಸಿದ ಕಾಡುಕೋಣ, ಕೊನೆಗೂ ಕೋಣದ ರಕ್ತ ಹೀರಿದ ಹುಲಿ: ಬಂಡೀಪುರದಲ್ಲಿ ನಡೆದ ಘಟನೆ ವೀಡಿಯೋ ವೈರಲ್

ಬೆಂಗಳೂರು, ಮೇ 12, 2019 (www.justkannada.in): ಬೇಟೆಗಾಗಿ ಬಂದ ಹುಲಿಯನ್ನ ಧೈರ್ಯವಾಗಿ ಓಡಿಸಿದ ಒಂಟಿ ಕೋಣ… ಹುಲಿಯನ್ನೆ ಅಟ್ಟಾಡಿಸಿದ ಕಾಡುಕೋಣದ ವಿಡೀಯೋ ವೈರಲ್ ಆಗಿದೆ.

ಗುಂಪಿನಲ್ಲಿ ಮೇಯುವಾಗ ಬೇಟೆಗಾಗಿ ಕಾಯುತ್ತಿದ್ದ ಹುಲಿದಾಳಿಗೆ ಹೆದರದೇ ಕಾಡೆಮ್ಮೆಗಳ ಗುಂಪು ಹುಲಿಯನ್ನೇ ಅಟ್ಟಾಡಿಸಿವೆ. ಈ ವೇಳೆ ಅಲ್ಲಿಂದ ಹುಲಿ ಓಟ ಕಿತ್ತಿದೆ. ಹುಲಿ ಹೋದ ಬಳಿಕ ಧೈರ್ಯದಿಂದ ಗುಂಪಿನಿಂದ ಕಾಡುಕೋಣ ಬೇರ್ಪಟ್ಟಿದೆ.

ನಾನೇ ಓಡಿಸಿದೆ ಎಂಬಂತೆ ಅಲ್ಲೇ ನಿಂತು ಗುಟುರು ಹಾಕುತ್ತಿದ್ದ ಕೋಣ. ಗುಂಪು ತನ್ನೊಂದಿಗೆ ಇದೆಯೋ ಇಲ್ಲವೋ ಎಂಬುದನ್ನು ಅರಿಯದ ಕೋಣ ಕೊನೆಗೆ ಅದೇ ಹುಲಿಯಿಂದ ಹತನಾಗಿದೆ.

ಬೇರ್ಪಟ್ಟ ಕೋಣದ ಮೇಲೆ ಹುಲಿ ಅಟ್ಯಾಕ್ ಮಾಡಿ ರಕ್ತ ಹೀರಿದೆ.  ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಬಂಡೀಪುರದ ಸಫಾರಿಗೆಂದು ತೆರಳಿದ್ದ ಪ್ರವಾಸಿಗರಿಗೆ ಈ ದೃಶ್ಯ ಕಂಡಿದೆ.