ಶಾಸಕ ಪ್ರದೀಪ್ ಈಶ್ವರ್ ರಿಂದ ಚಿಲ್ಲರೆ ರಾಜಕಾರಣ: ಧೈರ್ಯವಿದ್ರೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲಲಿ- ಡಾ.ಕೆ.ಸುಧಾಕರ್ ಸವಾಲು.

ಚಿಕ್ಕಬಳ್ಳಾಪುರ,ಜುಲೈ,29,2023(www.justkannada.in): ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ರೌಡಿ ರಾಜಕಾರಣ ಬೆಳೆಸುತ್ತಿದ್ದಾರೆ. ಪ್ರದೀಪ್ ಈಶ್ವರ್ ಗೆ ಧೈರ್ಯವಿದ್ರೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲಲಿ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಕೆ.ಸುಧಾಕರ್, ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಶಾಂತಿಯುತವಾಗಿತ್ತು. ಆದರೆ ಇದೀಗ ಕ್ಷೇತ್ರದ ಬಿಜೆಪಿ ಮುಖಂಡರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದೌರ್ಜನ್ಯ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಗುಂಡಾಗಿರಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರದೀಪ್ ಈಶ್ವರ್ ಮುಖ ನೋಡಿದ ರೆ 5 ಸಾವಿರ ವೋಟ್ ಬರಲ್ಲ. ಧೈರ್ಯವಿದ್ದರೇ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲಲಿ. ಕಾಂಗ್ರೆಸ್ ನಿಂದ ಹೊರಬಂದು ಸ್ಪರ್ಧಿಸಲಿ. ನಾನು ಬಿಜೆಪಿ ಬಿಟ್ಟು ಹೊರಬಂದು ಸ್ಪರ್ಧಿಸುತ್ತೇನೆ. ನಿನಗೆ ಎಷ್ಟು ವೋಟ್ ಬರುತ್ತೆ. ನನಗೆ ಎಷ್ಟು ವೋಟ್ ಬರುತ್ತೆ ಇಬ್ಬರಲ್ಲಿ ಯಾರು ಗೆಲ್ತಾರೆ ನೋಡೋಣ ಎಂದು ಸವಾಲು ಹಾಕಿದರು.

Key words:  politics – MLA -Pradeep Eshwar-Dr. K. Sudhakar -challenge.