ನನಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ವಿರೋಧ ಎಂಬುದು ಸುಳ್ಳು- ಸಚಿವ ಬೋಸರಾಜು.

ರಾಯಚೂರು,ಜುಲೈ,29,2023(www.justkannada.in): ಸಚಿವರ ವಿರುದ್ಧ ಶಾಸಕರು ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಸಚಿವ ಬೋಸರಾಜು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಬೋಸರಾಜು, ಸಚಿವ ಸ್ಥಾನ ನೀಡಿದ್ದನ್ನು  ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ.  ಸಚಿವ ಸ್ಥಾನ ಅದು ಹೈಕಮಾಂಡ್ ನಿರ್ಧಾರ. ನನ್ನನ್ನ ಸೇರಿ 34 ಜನರಿಗೆ ಹೈಕಮಾಂಡ್ ಸಚಿವ ಸ್ಥಾನ ನೀಡಿದೆ. ಈ ಬಗ್ಗೆ ಈವರೆಗೆ ಯಾರು ವಿರೋಧ ಮಾಡಿಲ್ಲ . ನನಗೆ ಸಚಿವಸ್ಥಾನ ಕೊಟ್ಟಿದ್ದಕ್ಕೆ ವಿರೋಧೀಸಲಾಗಿದೆ ಎಂಬುದು ಸುಳ್ಳು. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪವೇ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

Key words: opposition – ministerial -post – lie-Minister -Bosaraju.