ರಾಜಕೀಯದಲ್ಲಿ ಹೊಸ ಯುಗ ಪ್ರಾರಂಭಿಸಿದ ಕೀರ್ತಿ ಡಿ.ದೇವರಾಜ ಅರಸು ಅವರದ್ದು- ಹಿರಿಯ ಸಾಹಿತಿ ಪ್ರೊ. ಕೆ. ಎಸ್. ಭಗವಾನ್…

ಮೈಸೂರು,ಡಿಸೆಂಬರ್,15,2020(www.justkannada.in): ಹಿಂದುಳಿದವರ ಬಗ್ಗೆ ಬಹಳ ಕಾಳಜಿ ಹೊಂದಿದ್ದವರು ಡಿ.ದೇವರಾಜ ಅರಸು.ಹಿಂದುಳಿದವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದಿದ್ದವರು. ರಾಜಕೀಯದಲ್ಲಿ ಹೊಸ ಯುಗ ಪ್ರಾರಂಭಿಸಿದ ಕೀರ್ತಿ  ಡಿ.ದೇವರಾಜ ಅರಸು ಅವರದ್ದು ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್ ಭಗವಾನ್ ಬಣ್ಣಿಸಿದರು.I didn't knew CM BSY will think so cheaply - KPCC President D.K. Shivakumar

ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರ ಸಾಮಾಜಿಕ ಚಿಂತನೆಗಳ ಕುರಿತು ಅರಸು ಪ್ರತಿಷ್ಟಾಪನಾ ಸಮಿತಿ ಹಾಗೂ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿತ್ತು. ಜ್ಯೋತಿ ಬೆಳಗಿಸಿ, ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ‌ ವಿಚಾರಗೋಷ್ಠಿಗೆ ಹಿರಿಯ ಸಾಹಿತಿ ಪ್ರೊ. ಕೆ. ಎಸ್. ಭಗವಾನ್ ಚಾಲನೆ ನೀಡಿದರು.

ಇತ್ತೀಚಿನ ರಾಜಕಾರಣಿಗಳಿಗೆ ಓದುವ ಅಭ್ಯಾಸವೇ ಇಲ್ಲ….

ವಿಚಾರಗೋಷ್ಠಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರೊ.ಕೆ.ಎಸ್ ಭಗವಾನ್,  ಡಿ.ದೇವರಾಜ ಅರಸು ಅವರು ಹಿಂದುಳಿದವರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಹಿಂದುಳಿದವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದಿದ್ದವರು. ರಾಜಕೀಯದಲ್ಲಿ ಹೊಸ ಯುಗ ಪ್ರಾರಂಭಿಸಿದ ಕೀರ್ತಿ ಅವರದ್ದು. ಅವರು ಸಾಹಿತ್ಯದಲ್ಲೂ ಸಾಕಷ್ಟು ಆಸಕ್ತಿ ಹೊಂದಿದ್ದವರು. ಆದರೆ ಇತ್ತೀಚಿನ ರಾಜಕಾರಣಿಗಳಿಗೆ ಓದುವ ಅಭ್ಯಾಸವೇ ಇಲ್ಲ. ಹಾಗಾಗಿ ಹೊಸ ಹೊಸ ಆಲೋಚನೆಗಳು ಅವರಿಗಿರುವುದಿಲ್ಲ ಎಂದು ಟೀಕಿಸಿದರು. Politics- D. Devaraja arasu-Senior Literature -Pro. K. S. Bhagavan

ಹಾಗೆಯೇ ದೇವರಾಜ ಅರಸು ಅಂತಹವರ ರಾಜಕಾರಣಿ ಅಪರೂಪ. ಅವರ ಚಿಂತನೆಗಳನ್ನು,ವಿಚಾರಗಳನ್ನು ನಾವು ಕೂಡಾ ಅಳವಡಿಸಿ ಕೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಹೆಚ್.ಎ ವೆಂಕಟೇಶ್, ಮಡ್ಡಿಕೆರೆ ಗೋಪಾಲ್, , ಚಂದ್ರಶೇಖರ, ಪ್ರತಿಷ್ಠಾನದ ಅಧ್ಯಕ್ಷ ಜಾಕೀರ್ ಹುಸೇನ್ ಹಾಗೂ ಹಲವು ಸಾಹಿತಿಗಳು, ಪ್ರಗತಿಪರ ಚಿಂತಕರು ಇತರರು ಉಪಸ್ಥಿತರಿದ್ದರು.

english summary…..

The credit of starting a new era in politics goes to Late D. Devraj Urs – Prof. K.S. Bhagwan
Mysuru, Dec. 15, 2020 (www.justkannada.in): “Former Chief Minister of Karnataka Late D. Devraj Urs had a concern for the backward classes he introduced many programmes for the development of backward caste people. The credit of introducing a new era in politics goes to him,” opined senior litterateur Prof. K.S. Bhagawan.
He participated in a seminar on ‘Social thoughts of former Chief Minister D. Devraj Urs,’ organized by the Ursu Pratishtapana Samiti, and Mysuru City and Rural District Congress Committee, held at the Congress office today he said, apart from bringing many reforms in politics he also had interest in literature, that is absent in the politicians today. “Nobody has reading habits and, hence they lack new thoughts,” he said.
Mentioning D.Devraj Urs as a rare politician, he wished everyone to adopt his views and ideas.
Keywords: D. Devraj Urs/ Seminar/ Prof. K.S. Bhagwan

Key words: Politics- D. Devaraja arasu-Senior Literature -Pro. K. S. Bhagavan