ಬಿಎಸ್ ವೈ ವಿರುದ್ದ ದ್ವೇಷದ ರಾಜಕಾರಣ ಆರೋಪ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು,ಜೂನ್,14,2024 (www.justkannada.in): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಪೋಕ್ಸೋ ಪ್ರಕರಣ ವಾರೆಂಟ್ ಜಾರಿ ವಿಚಾರ ಸಂಬಂಧ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಯಾರ ಮೇಲೂ ದ್ವೇಷ ರಾಜಕಾರಣ ಮಾಡಲ್ಲ. ಬಿಎಸ್ ವೈ ನೋಡಿದರೇ ಅಯ್ಯೋ ಅನ್ನಿಸುತ್ತೆ. ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿದ್ದು ಯಾವ ರಾಜಕಾರಣ?  ದ್ವೇಷ ರಾಜಕಾರಣ ಮಾಡುತ್ತಿವುದು ಬಿಜೆಪಿ ಹೊರತು ನಾವಲ್ಲ.  ನಾವು ಇಂತಹ ನೀಚ ರಾಜಕಾರಣ ಮಾಡಲ್ಲ ಎಂದರು.

ಒಕ್ಕಲಿಗ ನಾಯಕರಿಗೆ ಔತಣಕೂಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್,   ಎಂಪಿ ಚುನಾವಣೆಯಲ್ಲಿ ಸೋಲಾಗಿರುವುದನ್ನ ಒಪ್ಪಿಕೊಳ್ಳುತ್ತೇವೆ ಯಾಕೆ ಈ ರೀತಿಯ ವೋಟಿಂಗ್ ಆಗಿದೆ ಎಂಬುದರ ಬಗ್ಗೆ ಚರ್ಚೆಯಾಗಿದೆ.  ರಾಜಕಾರಣದಲ್ಲಿ ಇದೆಲ್ಲಾ ನಡೆಯುತ್ತೆ.  ಹಿಂದೆ ಚಲುವರಾಯಸ್ವಾಮಿ ಬಾಲಕೃಷ್ಣ ಇವರೆಲ್ಲರೂ ಸೋತಿದ್ದರು ಅವರೆಲ್ಲಾ ಮತ್ತೆ ಗೆದ್ದಿದ್ದಾರೆ ಇವೆಲ್ಲವೂ ಶಾಶ್ವತ  ಅಲ್ಲ ಚುನಾವಣೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ ಎಂದರು.

Key words: politics, against, BSY, DCM DK Shivakumar, BJP