ಬಿಎಸ್ ವೈ ವಿರುದ್ದ ಪೋಕ್ಸೋ ಕೇಸ್: ಸರ್ಕಾರ ರಾಜಕೀಯಗೊಳಿಸುತ್ತಿದೆ- ಸಿ.ಟಿ ರವಿ ಆರೋಪ.

ಬೆಂಗಳೂರು,ಜೂನ್,14,2024 (www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯಗೊಳಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿ.ಟಿ ರವಿ ಕೋರ್ಟ್ ಏನೇ ತೀರ್ಪು ಕೊಟ್ಟರೂ ಗೌರವಿಸುತ್ತೇವೆ. ಸರ್ಕಾರ ಪ್ರಕರಣ ರಾಜಕೀಯಗೊಳಿಸುತ್ತಿದೆ  3 ತಿಂಗಳಿಂದ ಇಲ್ಲದ ಕೇಸ್ ಈಗ ಹೇಗೆ ಬಂತು.   50ಕ್ಕೂ ಹೆಚ್ಚು ಗಣ್ಯರ ಮೇಲೆ ದೂರುದಾರ ಮಹಿಳೆ ದೂರು ನೀಡಿದ್ದಾರೆ. ದೂರು ನೀಡಿದ್ದ ಮಹಿಳೆ ಮಾನಸಿಕ ಅಸ್ವಸ್ಥೆ. ಈಗ ಸರ್ಕಾರದ ನಿಲುವು ಬದಲಾಗಲು ಕಾರಣವೇನು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದು ಕಾರಣವೇ? ಸಿಎಂ ತವರಲ್ಲಿ ಸೋತಿದ್ದು ಕಾರಣವೇ?   ಡಿಕೆ ಸಹೋದರನ ಸೋಲು ಕಾರಣವೇ..? ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದು ಕಾರಣವೇ? ಇಲ್ಲ ರಾಹುಲ್ ಗಾಂಧಿ ಕೋರ್ಟ್ ಮೆಟ್ಟಿಲೇರಿದ್ದು ಕಾರಣವೇ ? ಎಂದು ಕಿಡಿಕಾರಿದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿಟಿ ರವಿ, ದರ್ಶನ್ ಪ್ರಕಣರಲ್ಲಿ ಪೊಲೀಸ್ ನಡೆ ಸರಿಯಲ್ಲ. ಜನರ ಹಿತದೃಷ್ಠಿಯಿಂದ ಪೊಲೀಸರು ನಡೆದುಕೊಳ್ಳಬೇಕು.  ಜನರ ಸಂಶಯವನ್ನ ಸಿಎಂ, ಡಿಸಿಎಂ, ಗೃಹ ಮಂತ್ರಿ ನಿವಾರಿಸಲಿ. ಕೇವಲ ಕಮೆಂಟ್ ಮಾಡಿದ್ದಕ್ಕೆ ಕೊಲೆ ಮಾಡುವುದಾದರೇ ದಿನನಿತ್ಯ ರಾಜಕಾರಣಿಗಳನ್ನ ಮರ್ಡರ್ ಮಾಡಬೇಕಿತ್ತು ಎಂದು ಹೇಳಿದರು.

Key words: POCSO, case, BSY, politicizing, CT Ravi