Thursday, October 1, 2026

BDA Apartments

Home Front Page ಜೆಡಿಎಸ್ ಗೆ 100 ಸೀಟ್ ಬಂದರೆ ರಾಜಕೀಯ ನಿವೃತ್ತಿ- ಹೆಚ್.ಡಿಕೆಗೆ ಸಚಿವ ಸುಧಾಕರ್ ಸವಾಲು.

ಜೆಡಿಎಸ್ ಗೆ 100 ಸೀಟ್ ಬಂದರೆ ರಾಜಕೀಯ ನಿವೃತ್ತಿ- ಹೆಚ್.ಡಿಕೆಗೆ ಸಚಿವ ಸುಧಾಕರ್ ಸವಾಲು.

ಚಿಕ್ಕಬಳ್ಳಾಪುರ,ಏಪ್ರಿಲ್,4,2023(www.justkannada.in): ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿಗೆ 120 ಅಲ್ಲ ನೂರು ಸೀಟ್ ಬರಲ್ಲ. ಬಿಜೆಪಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ  ಜೆಡಿಎಸ್ ಗೆ ನೂರು  ಸೀಟ್ ಬಂದರೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದ್ದಾರೆ.ಜೆಡಿಎಸ್ ಗೆ 100 ಸೀಟ್ ಬಂದರೆ ರಾಜಕೀಯ ನಿವೃತ್ತಿ- ಹೆಚ್.ಡಿಕೆಗೆ ಸಚಿವ ಸುಧಾಕರ್ ಸ...

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ  ಸುಧಾಕರ್,  ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ,ಜೆಡಿಎಸ್ ಅಧಿಕಾರಕ್ಕೆ ಬರಲ್ಲ. ಸ್ಪಷ್ಟಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ  ಬರುತ್ತದೆ. ಈ ಬಾರಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ಬರಲ್ಲ. ಅತಂತ್ರ  ಸ್ಥಿತಿ  ಬರಲು ಜನರು ಅವಕಾಶ ನೀಡಲ್ಲ ಎಂದು ಹೇಳಿದರು.

Key words:  Political- retirement – JDS – 100 seats-  Minister- Sudhakar –challenges- HDK.