ಬೆಂಗಳೂರು ಕೋಲಾರ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಧೃವೀಕರಣ- ಸಚಿವ ಡಾ.ಕೆ.ಸುಧಾಕರ್.

ಚಿಕ್ಕಬಳ್ಳಾಪುರ,ಡಿಸೆಂಬರ್,10,2021(www.justkannada.in): ಬೆಂಗಳೂರು ಕೋಲಾರಮ ಚಿಕ್ಕಬಳ್ಳಾಪುರ ಜಿಲ್ಲೆ ರಾಜಕೀಯ ಧೃವೀಕರಣವಾಗಲಿದೆ.  ಕಾಂಗ್ರೆಸ್ , ಜೆಡಿಎಸ್ ಮುಖಂಡರು ಬಿಜೆಪಿ ಸೇರುತ್ತಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ ಸುಧಾಕರ್, ಕೋವಿಡ್  3ನೇ ಅಲೆ ಬಗ್ಗೆ ಆತಂಕ ಭಯ ಬೇಡ 3ನೇ ಅಲೆಯಲ್ಲಿ ಸಾವು ನೋವಿನ ಆತಂಕ ಯಾರಿಗೂ ಬೇಡ.  ಹಂತ ಹಂತವಾಗಿ ಮಾರ್ಗಸೂಚಿ ಜಾರಿ ಮಾಡಲಾಗುತ್ತದೆ. ಈ ಸಂಬಂಧ  ಸಿಎಂ ಜತೆ ನಿರಂತರ ಸಂಪರ್ಕದಲ್ಲಿದೇವೆ ಎಂದರು.

ಹಾಗೆಯೇ ಕೊರೋನಾ 3ನೇ ಅಲೆ ಭೀತಿ ಎದುರಾದರೂ ಶಾಲಾ ಕಾಲೇಜು ಬಂದ್ ಇಲ್ಲ.  ಲಾಕ್ ಡೌನ್ ಪ್ರಶ್ನೆಯೇ ಇಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Political- polarization –Chikkaballapur- Bangalore-Minister- Dr. K. Sudhakar.