Wednesday, August 19, 2026

BDA Apartments

Home Front Page “ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಮೈತ್ರಿ ವಿಚಾರದಲ್ಲಿ ತಟಸ್ಥ” – ಶಾಸಕ ಸಾ.ರಾ.ಮಹೇಶ್

“ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಮೈತ್ರಿ ವಿಚಾರದಲ್ಲಿ ತಟಸ್ಥ” – ಶಾಸಕ ಸಾ.ರಾ.ಮಹೇಶ್

ಮೈಸೂರು,ಜನವರಿ,27,2021(www.justkannada.in) : ಪಾಲಿಕೆ ಮೈತ್ರಿ ವಿಚಾರದಲ್ಲಿ ತಟಸ್ಥವಾಗಿದ್ದೇವೆ. ಮೈತ್ರಿ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ಮೀಸಲಾತಿ ಪ್ರಕಟವಾಗುವವರೆಗೂ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.jkನಗರ ಪಾಲಿಕೆ ಸದಸ್ಯರು ಮಾಜಿ ಮೇಯರುಗಳು ಕೆಲವು ಕಾಂಗ್ರೆಸ್ ನವರು ನಡೆದುಕೊಂಡ ರೀತಿಗಳನ್ನ ನಮ್ಮ ಗಮನಕ್ಕೆ ತಂದಿದ್ದಾರೆ. ನಗರದ ಇತರೆ ಕಾಂಗ್ರೆಸ್ ನಾಯಕರ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ. ಯಾರೋ ಇಬ್ಬರು ಮೂವರ ನಡೆವಳಿಕೆಯಿಂದ ಪಕ್ಷವನ್ನ ದೂರುವುದಕ್ಕೆ ಸಾಧ್ಯವಿಲ್ಲ ಎಂದರು.

ಆದರೆ, ಮೀಸಲಾತಿ ಪ್ರಕಟ ನಂತರ ನಮ್ಮ ಸದಸ್ಯರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ. ಎರಡು ಪಕ್ಷಗಳು ರಾಜಕೀಯವಾಗಿ ನಮ್ಮ ವಿರೋಧಿಗಳೇ. ಹಾಗಾಗಿ ಸದ್ಯ ತಟಸ್ಥವಾಗಿ ಇರುತ್ತೇವೆ ಎಂದು ಮೈತ್ರಿ ನಡೆ ಬಗ್ಗೆ ಶಾಸಕ ಸಾ.ರಾ.ಮಹೇಶ್ ದ್ವಂದ್ವ ಹೇಳಿಕೆ ನೀಡಿದ್ದಾರೆ.

ಮೈಸೂರು ಪಾಲಿಕೆ ಮೈತ್ರಿ ಬಿಎಸ್ ವೈ ಗ್ರೀನ್ ಸಿಗ್ನಲ್?

ಮೈಸೂರು ಪಾಲಿಕೆ ಮೈತ್ರಿ ಬಿಎಸ್ ವೈ ಗ್ರೀನ್ ಸಿಗ್ನಲ್? ಜೆಡಿಎಸ್ ಜೊತೆಗಿನ ಪಾಲಿಕೆ ಮೈತ್ರಿಗೆ ಸಿಎಂ ಒಪ್ಪಿಗೆ. ಮೇಯರ್ ಚುನಾವಣೆ ಸಂಪೂರ್ಣ ಜವಬ್ದಾರಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೆಗಲಿಗಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಕೆಲ ಬಿಜೆಪಿ ಮುಖಂಡರನ್ನ ಹೊರಗಿಟ್ಟು ರಾಜ್ಯ ನಾಯಕರಿಂದಲೇ ಮೇಯರ್ ಚುನಾವಣೆ ಬ್ಲೂ ಪ್ರಿಂಟ್ ರೆಡಿ‌ ಮಾಡಲಿರೋ ಬಿಜೆಪಿ. ಮೇಯರ್ ಚುನಾವಣೆ ಮೀಸಲಾತಿ ಪ್ರಕಟ ಮುನ್ನವೇ ಮೈತ್ರಿ ಫೈನಲ್ ಸಾಧ್ಯತೆ?

ಅತ್ತ ಮೇಯರ್ ಸ್ಥಾನಕ್ಕಾಗಿ ಮತ್ತೊಮ್ಮೆ ಜೆಡಿಎಸ್ ಪಟ್ಟು. ಮೇಯರ್ ಸ್ಥಾನ ಬಿಟ್ಟುಕೊಟ್ಟಲ್ಲಿ ಮಾತ್ರ ಮೈತ್ರಿಗೆ ಒಪ್ಪಿಗೆ ಸೂಚಿಸೋ ಇಂಗಿತದಲ್ಲಿ ಜೆಡಿಎಸ್. ಜೆಡಿಎಸ್ ನ ನಡೆಯ ಕುತೂಹಲ ಕೆರಳಿಸಿದೆ.

ಗಣರಾಜೋತ್ಸವ ಸಂದರ್ಭದ ಘಟನೆಗೆ ಸಾ.ರಾ.ಮಹೇಶ್ ಖಂಡನೆ

ತಿಂಗಳುಗಳಿಂದ ಹೋರಾಟ ಮಾಡುತ್ತಿರುವ ಕೆಲವು ರೈತರು ನೆನ್ನೆ ತಮ್ಮ ವ್ಯಾಪ್ತಿಯನ್ನ ಮೀರಿದ್ದಾರೆ. ಇದು ಪೊಲೀಸರ ವೈಫಲ್ಯ ಅಥವಾ ರೈತರ ದುಡುಕು ನಿರ್ಧಾರ ಅಂತಾನು ಹೇಳಬಹುದು ಎಂದಿದ್ದಾರೆ.

ನೆನ್ನೆ ಈ ಘಟನೆ ಆಗಬಾರದಿತ್ತು. ಪ್ರಧಾನಿ, ರಾಷ್ಟ್ರಪತಿ ಇರುವ ಜಾಗದಲ್ಲಿ ಪೊಲೀಸರು ಮತ್ತು ರೈತರು ಇಬ್ಬರಿಗೂ ನೋವಾಗಿದೆ. ಘಟನೆಗೆ ಯಾರೇ ಕಾರಣವಾಗಿದ್ದರು ಸರಿಯಲ್ಲ. ಹೋರಾಟದ ಸಂದರ್ಭದಲ್ಲೂ  ಪ್ರತಿಭಟನಾಕಾರರು ನಮ್ಮ ಆಸ್ತಿ ನಮ್ಮ ಸರ್ಕಾರ ಅನ್ನೋದನ್ನ ಮನದಲ್ಲಿಟ್ಟುಕೊಳ್ಳಬೇಕು. ಪೊಲೀಸರು ಪ್ರತಿನಿತ್ಯ ನಮ್ಮ ಕೆಲಸವನ್ನ ಮಾಡೋರು ಎಂದು ಹೇಳಿದ್ದಾರೆ.letter-cm-staff-corruption-agriculture-department-mla-sa-ra-maheshರೈತರು ದೇಶದ ಬೆನ್ನೆಲುಬು. ಈ ಇಬ್ಬರಿಗೂ ನೋವಾಗಿದೆ. ಆದರೆ, ಈ ಘಟನೆ ನಡೆದಿರೋದು ನಿಜಕ್ಕೂ ಖಂಡನೀಯ. ತನಿಖೆಯಿಂದ ಸತ್ಯ ಹೊರಬರಬೇಕು ಎಂದು ತಿಳಿಸಿದ್ದಾರೆ.

key words : Policy Mayor-Submayor-Election-case-alliance-
Neutral-MLA Mahesh