Tuesday, September 15, 2026

BDA Apartments

ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ ವ್ಯಕ್ತಿ ಜೀವ ಉಳಿಸಿದ ಪೊಲೀಸರು BDA JK_Adv BDA...
Home Crime ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ ವ್ಯಕ್ತಿ ಜೀವ ಉಳಿಸಿದ ಪೊಲೀಸರು

ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ ವ್ಯಕ್ತಿ ಜೀವ ಉಳಿಸಿದ ಪೊಲೀಸರು

ರಾಮನಗರ,ಅಕ್ಟೋಬರ್,21,2024 (www.justkannada.in): ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ  ದಾಖಲಿಸಿ ಪೊಲೀಸರು ವ್ಯಕ್ತಿಯ ಜೀವ ಉಳಿಸಿದ್ದಾರೆ

ರಾಮನಗರದ ಅರ್ಚಕರಹಳ್ಳಿ ಸಮೀಪ ಈ  ಘಟನೆ ನಡೆದಿದೆ.  ರವಿಕುಮಾರ್ (45) ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ. ಮೂಲತಃ ಮೈಸೂರಿನ ಯರಗನಹಳ್ಳಿ ನಿವಾಸಿ ರವಿಕುಮಾರ್ ಇಂದು ಬೆಳಗ್ಗೆ ಟೀ ಅಂಗಡಿ ಮೇಲ್ಚಾವಣಿಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಹಗ್ಗ ತುಂಡಾಗಿ ಕೆಳಗ್ಗೆ ಬಿದ್ದ ಹಿನ್ನೆಲೆ ತಲೆಗೆ ಪೆಟ್ಟು ಬಿದ್ದು ರವಿಕುಮಾರ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಈ ಸಮಯದಲ್ಲಿ ಸ್ಥಳೀಯರು ವ್ಯಕ್ತಿ ಸಾವನಪ್ಪಿದ್ದಾನೆಂದು ಆತನ ಮೇಲೆ ಚೀಲ ಮುಚ್ಚಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಐಜೂರು ಪೊಲೀಸರು, ಪರಿಶೀಲನೆ ನಡೆಸಿದಾಗ ವ್ಯಕ್ತಿ ಬದುಕಿದ್ದನ್ನ ತಿಳಿದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿದಿದೆ.  ಪೊಲೀಸರ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ‌ ವ್ಯಕ್ತವಾಗಿದೆ.

Key words: police saved , injured man, life, commit suicide