Saturday, September 5, 2026

BDA Apartments

Home Crime ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಮೇಲೆ ಪೊಲೀಸರಿಂದ ಫೈರಿಂಗ್, ಬಂಧನ

ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಮೇಲೆ ಪೊಲೀಸರಿಂದ ಫೈರಿಂಗ್, ಬಂಧನ

ಹುಬ್ಬಳ್ಳಿ,ಮಾರ್ಚ್,15,2025 (www.justkannada.in):  ಹುಬ್ಬಳ್ಳಿಯಲ್ಲಿ ವಿಧಾನಪರಿಷತ್  ಸಭಾಪತಿ ಬಸವರಾಜ್ ಹೊರಟ್ಟಿ ಮನೆಯ ಬಳಿ ದರೋಡೆ  ಮಾಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ.

ಇರ್ಷಾದ್ ಹಾಗೂ ಅಕ್ಬರ್ ಬಂಧಿತ ದರೋಡೆಕೋರರು. ಬಂಧಿತರು ಅಂತರಾಜ್ಯ ಕಳ್ಳರಾಗಿದ್ದು, ತಮ್ಮನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು.

ಈ ವೇಳೆ ಹುಬ್ಬಳ್ಳಿ ಉಪನಗರ ಠಾಣಾ ಪೊಲೀಸರು ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ ಎನ್ನಲಾಗಿದೆ. ಕಾರ್ಯಾಚರಣೆ ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Key words: Police, fire robber, arrest, Hubli