POCSO ಅಡಿ ಕಾಗ್ನಿಜೆನ್ಸ್‌ :ಮಾಜಿ ಸಿಎಂ ಯಡಿಯೂರಪ್ಪಗೆ ಹೈಕೋರ್ಟ್‌ ನಲ್ಲಿ ನಿರಾಸೆ.

The High Court has upheld the trial court's action taken by Cognizance under the POCSO (Protection of Children from Sexual Offences) Act against former Chief Minister Yediyurappa for allegedly sexually harassing a minor.

 

ಬೆಂಗಳೂರು ನ.೧೩,೨೦೨೫ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ( ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ) ಯಡಿ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಪ್ರಕರಣ ಸಂಬಂಧ ಬಿ.ಎಸ್.ಯಡಿಯೂರಪ್ಪ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕ ಸದಸ್ಯ ಪೀಠ, ವಿಚಾರಣಾ ನ್ಯಾಯಾಲಯದ ಕ್ರಮ ಎತ್ತಿಹಿಡಿಯಿತು.

ಜತೆಗೆ ವಿಶೇಷ ನ್ಯಾಯಾಲಯವು ಅರ್ಜಿದಾರರು ವಿಚಾರಣೆಗೆ ಅಗತ್ಯವಿದಲ್ಲಿ ಮಾತ್ರ ಹಾಜರಾಗುವಂತೆ ತಿಳಿಸಬೇಕು. ಅಲ್ಲದೆ, ಖುದ್ದು ವಿಚಾರಣೆಗೆ ಹಾಜರಾಗಲು ಸೂಕ್ತ ಕಾರಣಗೊಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸಬೇಕು. ಈ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳ ಮೇಲೆ ಪ್ರಭಾವಕ್ಕೊಳಗಾಗದೆ. ಪ್ರಕರಣದ ಸಂಬಂಧ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆದೇಶ ಹೊರಡಿಸಬಹುದಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದಿಂದ ತನನ್ನು ಆರೋಪ ಮುಕ್ತರಾಗುವುದು ಸೇರಿದಂತೆ ಯಾವುದೇ ಮನವಿಗಳಿದ್ದಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಲು ಅರ್ಜಿದಾರರು ಸಂಪೂರ್ಣ ಸ್ವಾತಂತ್ರರಾಗಿರಲಿದ್ದಾರೆ ಎಂದು ಪೀಠ ಇದೇ ವೇಳೆ ತಿಳಿಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ವಿಚಾರಣೆಗೆ ಕಾಲಮಿತಿ ನಿಗದಿ ಪಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪೀಠ, ಆ ರೀತಿಯ ಆದೇಶಗಳನ್ನು ಮಾಡಲಾಗದು ಎಂದು  ಹೇಳಿ ಅರ್ಜಿ ಇತ್ಯರ್ಥ ಪಡಿಸಿರುವುದಾಗಿ ಮೌಖಿಕವಾಗಿ ತಿಳಿಸಿತು.

KEY WORDS: Cognizance, under POCSO, Former CM, Yediyurappa, disappointed in, High Court.

SUMMARY:

Cognizance under POCSO: Former CM Yediyurappa disappointed in High Court.

The High Court has upheld the trial court’s action taken by Cognizance under the POCSO (Protection of Children from Sexual Offences) Act against former Chief Minister Yediyurappa for allegedly sexually harassing a minor.