ನಾನು ಯಾರ ಮೇಲೂ ದೂರುವುದಿಲ್ಲ:ಜೂ.17ಕ್ಕೆ ಹಾಜರಾಗುತ್ತೇನೆ- ಮಾಜಿ ಸಿಎಂ ಬಿಎಸ್ ವೈ.

ಬೆಂಗಳೂರು,ಜೂನ್,15,2024 (www.justkannada.in): ಪೋಕ್ಸೋ ಪ್ರಕರಣ ಸಂಬಂಧ ನಾನು ಯಾರ ಮೇಲೂ ದೂರುವುದಿಲ್ಲ. ಜೂನ್ 17ಕ್ಕೆ ಹಾಜರಾಗುತ್ತೇನೆ ಎಂದಿದ್ದೆ. ಅಂದು ವಿಚಾರಣೆಗೆ ಹೋಗುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಇಂದು ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಿಗದಿತ ಕಾರ್ಯಕ್ರಮ ಹಿನ್ನೆಲೆ ದೆಹಲಿಗೆ ಹೋಗಿದ್ದೆ. ಪೊಲೀಸರ ವಿಚಾರಣೆಗೆ ಜೂನ್ 17ಕ್ಕೆ ಬರುವುದಾಗಿ ನಾನು ಮೊದಲೇ ಹೇಳಿದ್ದೆ. ಪ್ರಕರಣ ಸಂಬಂಧ ಹೈಕೋರ್ಟ್ ಸಹ ತಡೆಯಾಜ್ಞೆ ‌ನೀಡಿದೆ, ಸೋಮವಾರ ನಾನು ವಿಚಾರಣೆಗೆ  ಹಾಜರಾಗುತ್ತೇನೆ ಎಂದರು.

ಈ ವಿಚಾರದಲ್ಲಿ ಅನವಶ್ಯಕವಾಗಿ ಗೊಂದಲ ಉಂಟು ಮಾಡುವ ಕೆಲಸ ಮಾಡಿದ್ದರು. ನಾನು ಯಾರ ಮೇಲೆ ದೂರುವುದಿಲ್ಲ. ಕಾಲವೇ ಎಲ್ಲ ತೀರ್ಮಾನ ಮಾಡಲಿದೆ, ವಾಸ್ತವ ಏನು ಅಂತ ಜನರಿಗೆ ಗೊತ್ತಿದೆ. ಯಾರು ಕುತಂತ್ರ ಮಾಡ್ತಿದ್ದಾರೋ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಎಸ್ ವೈ ತಿಳಿಸಿದರು.

Key words: POCSO case, attend, June 17, Former CM, BSY