ಈ ಈಸ್ಟ್ ಇಂಡಿಯಾ ಕಂಪನಿಗೆ ಪ್ರಧಾನಿ ನರೇಂದ್ರ ಮೋದಿಯೇ ಟಾರ್ಗೆಟ್- ವಿಪಕ್ಷಗಳ ಮೈತ್ರಿಕೂಟ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ಟೀಕೆ..

ಉಡುಪಿ,ಜುಲೈ,19,2023(www.justkannada.in):  ನಿನ್ನೆ ನಡೆದ ಸಭೆಯಲ್ಲಿ  ವಿಪಕ್ಷಗಳ ಮೈತ್ರಿಕೂಟ INDIA  ಎಂಬ ಹೆಸರಿಟ್ಟಿದ್ದು  ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾಕರಂಧ್ಲಾಜೆ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು,  ‘ದೇಶವನ್ನು 60 ವರ್ಷ ಲೂಟಿ ಮಾಡಿದವರು ಇದೀಗ ಒಂದಾಗಿದ್ದಾರೆ. ಈ ಈಸ್ಟ್ ಇಂಡಿಯಾ ಕಂಪನಿಗೆ ಪ್ರಧಾನಿ ನರೇಂದ್ರ ಮೋದಿಯೇ ಟಾರ್ಗೆಟ್ ಎಂದು ಕಿಡಿಕಾರಿದ್ದಾರೆ.

ಕಳೆದ ಬಾರಿಯಂತೆ ಮತ್ತೆ ಬಿರುಸಿನ ಪ್ರಚಾರ ಶುರು ಮಾಡಿದ್ದಾರೆ. ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರು ಇಟ್ಟುಕೊಂಡಿದ್ದಾರೆ. ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ  ಎಂದು ಶೋಭಾ ಕರಂಧ್ಲಾಜೆ ಟೀಕಿಸಿದ್ದಾರೆ.

Key words: PM Modi – target – East India Company- Union Minister -Shobha Karandhlaje