ಮೋದಿ ವಿಷ ಸರ್ಪ ಇದ್ದಂಗೆ: ನೆಕ್ಕಿದ್ರೆ ಸತ್ತು ಹೋಗ್ತಾರೆ –ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ.

ಗದಗ,ಏಪ್ರಿಲ್,27,2023(www.justkannada.in): ಪ್ರಧಾನಿ  ನರೇಂದ್ರ ಮೋದಿ ವಿಷ ಸರ್ಪ ಇದ್ದಂತೆ, ವಿಷ ಸರ್ಪ ನೆಕ್ಕಿದರೇ ಸತ್ತು ಹೋಗ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಗದಗದಲ್ಲಿ ಇಂದು ಪ್ರಚಾರದ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಿಮ್ಮ ಮನೆಯಲ್ಲಿ ದೇಶಕ್ಕಾಗಿ‌ ಒಂದೂ‌ ನಾಯಿ‌ ಕೂಡ ಸತ್ತಿಲ್ಲ. ದೇಶಕ್ಕೆ ಬಿಜೆಪಿಯವರ ಕೊಡಿಗೆ ಏನು ಅಂತಾ ಹೇಳಲಿ. ಉಚಿತ ಅಕ್ಕಿ ಕೊಡುವ‌ ಕೆಲಸ ಮಾಡಿದ್ದು ಸೋನಿಯಾ ಗಾಂಧಿ. ನರೇಗಾ ಮಾಡಿದ್ದು ನಾವು. ರಾಜ್ಯದಲ್ಲಿ ಬಿಜೆಪಿ ಮಾಡಿದ ಸಾಧನೆ ಅಂದ್ರೆ 40% ಕಮಿಷನ್​​. ಇಂತಹವರನ್ನು ಮೋದಿ ತನ್ನ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಒಬ್ಬ ಪ್ರಧಾನಿಯಾಗಿ ಹಳ್ಳಿ, ತಾಲೂಕಿಗೆ ಬಂದು ಓಡಾಡುತ್ತಿದ್ದಾರೆ. ಮೋದಿ‌ ಮುಖ ನೋಡಿ‌ ಮತ ಹಾಕಿ ಅಂತೀರಾ ಎಂದು ಕಿಡಿಕಾರಿದರು.

ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆ  15 ಲಕ್ಷ ಹಾಕುತ್ತೇನೆ ಎಂದಿದ್ದರು ಹಾಕಲಿಲ್ಲ.  ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ರಿ. ಆ ಪ್ರಕಾರ 18 ಕೋಟಿ ಯುವಕರಿಗೆ ನೌಕರಿ‌ ಕೊಡಬೇಕಿತ್ತು. ಸುಳ್ಳಿನ ಸರ್ದಾರ. ಹಗಲಿಗೆ ರಾತ್ರಿ, ರಾತ್ರಿಗೆ ಹಗಲು ಅಂತಾರೆ. ಡಬಲ್ ಇಂಜಿನ ಎರಡು ಕಡೆ ಫೇಲ್ ಆಗಿದೆ. ಡಬಲ್ ಇಂಜೀನ್ ಯಾಕೇ ನೌಕರಿ ಕೊಡ್ತಿಲ್ಲ. ಮೋದಿ ದೊಡ್ಡ ಸುಳ್ಳುಗಾರ. ನಮ್ಮ ಸರ್ಕಾರ ಇದ್ದಾಗ ದೊಡ್ಡ ದೊಡ್ಡ ಡ್ಯಾಂ, ದೊಡ್ಡ ದೊಡ್ಡ ನೀರಾವರಿ ಯೋಜನೆ ಮಾಡಿದ್ದೇವೆ. ಒಂಬತ್ತು ವರ್ಷದಲ್ಲಿ‌ ಮೋದಿ ಏನ್ ಮಾಡಿದ್ದಾರೆ ಎಂದು ಖರ್ಗೆ ಗುಡುಗಿದರು.

Key words: pm modi-snake-AICC-President-Mallikarjuna kharge