ದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗಿಲ್ಲ- ಭವಾನಿ ರೇವಣ್ಣರಿಗೆ ಬಿಜೆಪಿ ಶಾಸಕ ಪ್ರೀತಂಗೌಡ ತಿರುಗೇಟು.

ಹಾಸನ,ಏಪ್ರಿಲ್,27,2023(www.justkannada.in): ಹೆಚ್​ಡಿ ದೇವೇಗೌಡರಿಗೆ ಪ್ರೀತಂಗೌಡ ಅಗೌರವ ತೋರಿದ್ದಾರೆ ಎಂಬ ಭವಾನಿ ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿರುವ ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ, ದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗೆ ಇಲ್ಲ ಎಂದು ಟಾಂಗ್ ನೀಡಿದರು.

ಹಾಸನ ನಗರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಪ್ರೀತಂಗೌಡ, ಹೆಚ್​​.ಡಿ.ದೇವೇಗೌಡರನ್ನ ಕೊನೆ ಚುನಾವಣೆಯಲ್ಲಿ ತುಮಕೂರಿಗೆ ಕಳಿಸಿದರು. ಹಾಸನ ಕ್ಷೇತ್ರದಲ್ಲಿ ಗೆಲ್ಲಿಸಬೇಕು ಎಂಬುದು ಕಾರ್ಯಕರ್ತರ ಆಸೆ ಆಗಿತ್ತು. ಆದ್ರೆ ಅವರ ಸ್ವಾರ್ಥಕ್ಕೆ ಹೆಚ್​.ಡಿ.ದೇವೇಗೌಡರನ್ನು ತುಮಕೂರಿಗೆ ಕಳಿಸಿದರು. ಇದು ಅವರ ಕುಟುಂಬದಲ್ಲೇ ವ್ಯಕ್ತವಾಗಿರುವ ಮಾತು ಎಂದು ಹೇಳಿದರು.

ದೇವೇಗೌಡರು ಇಡೀ ದೇಶಕ್ಕೆ ಆಸ್ತಿ. ಅವರನ್ನು ಹಾಸನದಲ್ಲಿ ನಿಲ್ಲಿಸಿ ಗೆಲ್ಲಿಸಬೇಕು ಎಂಬುವುದು ಕಾರ್ಯಕರ್ತರ ಅಭಿಲಾಷೆ ಆಗಿತ್ತು. ಅದರೆ ಅವರ ಸ್ವಾರ್ಥಕ್ಕೆ, ಮಗನನ್ನ ಅಭ್ಯರ್ಥಿ ಮಾಡಲು ತುಮಕೂರಿಗೆ ಕಳಿಸಿದರು. ಅವರನ್ನು ತುಮಕೂರಿಗೆ ಕಳಿಸೋ ಅಗತ್ಯ ಏನಿತ್ತು ಎಂದು ಅವರೇ ಯೋಚನೆ ಮಾಡಲಿ ಎಂದು ಪ್ರೀತಂಗೌಡ ವಾಗ್ದಾಳಿ ನಡೆಸಿದರು.

Key words: Deve Gowda- family – respect – BJP MLA –Pritham gowda – Bhavani Revanna.