Sunday, August 23, 2026

BDA Apartments

Home Front Page ದಿಲ್ಲಿಯ ಗುರುದ್ವಾರ ರಾಕಬ್ ಗಂಜ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ದಿಲ್ಲಿಯ ಗುರುದ್ವಾರ ರಾಕಬ್ ಗಂಜ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ, ಡಿಸೆಂಬರ್ 20, 2020 (www.justkannada.in): ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ದಿಲ್ಲಿಯ ಗುರುದ್ವಾರ ರಾಕಬ್ ಗಂಜ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ಯಾವುದೇ ರೀತಿಯ ಪೂರ್ವಕಾರಣ ಮಾಡಿಕೊಂಡಿರಲಿಲ್ಲ. ಸಾಮಾನ್ಯ ಭಕ್ತರಿಗೂ ಇದೇ ವೇಳೆ ಗುರುದ್ವಾರ ಪ್ರವೇಶಕ್ಕೆ ಅವಕಾಶ ನೀಡಲಾಯಿತು.

ಇಂದು ಬೆಳಿಗ್ಗೆ, ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಪುಣ್ಯ ಶರೀರವನ್ನು ಅಂತ್ಯಸಂಸ್ಕಾರ ಮಾಡಿದ ಐತಿಹಾಸಿಕ ಗುರುದ್ವಾರ ರಕಾಬ್ ಗಂಜ್ ಸಾಹಿಬ್ ನಲ್ಲಿ ಪ್ರಾರ್ಥಿನೆ ಸಲ್ಲಿಸಿದ್ದೇನೆ.

ಪ್ರಪಂಚದಾದ್ಯಂತ ಲಕ್ಷಾಂತರ ಜನರಂತೆ ನಾನು ಶ್ರೀ ಗುರು ತೇಜ್ ಬಹದ್ದೂರ್ ಅವರ ದಯೆಯಿಂದ ಆಳವಾಗಿ ಸ್ಫೂರ್ತಿ ಪಡೆದಿದ್ದೇನೆ, ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.