ತಮ್ಮ ವೈಪಲ್ಯ ಮುಚ್ಚಿಕೊಳ್ಳಲು ಪ್ರಧಾನಿ ಮೋದಿ ಹೆಸರು ಎಳೆದು ತರುತ್ತಿದ್ದಾರೆ- ಮಾಜಿ ಶಾಸಕ ಸಿ.ಟಿ ರವಿ ವಾಗ್ದಾಳಿ.

ಚಿಕ್ಕಮಗಳೂರು,ಜೂನ್,20,2023(www.justkannada.in): ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಗುಡುಗಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾಜಿ ಸಚಿವ ಸಿ.ಟಿ ರವಿ, ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡುವುದು ಬೇಡ. ತನ್ನ ವೈಪಲ್ಯಗಳನ್ನ ಮುಚ್ಚಿಕೊಳ್ಳಲು ಪ್ರಧಾನಿ ಮೋದಿ ಅವರ ಹೆಸರನ್ನ ಎಳೆದು ತರುತ್ತಿದ್ದಾರೆ.

ರಾಜ್ಯದ ಸಿಎಂ ಅಕ್ಕಿಗೆ ಸಂಬಂಧಿಸಿದಂತೆ ಬೇಡಿಕೆ ಇಟ್ಟಿಲ್ಲ. ಸೌಜನ್ಯಕ್ಕಾದರೂ ಪ್ರಧಾ ಮೋದಿ  ಬಳಿ ಆಹಾರನಿಗಮದ ಬಳಿ ಸಿಎಂ ಬೇಡಿಕೆ ಇಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

Key words: PM Modi – name – rice-congress – former MLA- CT Ravi