ಕಾಂಗ್ರೆಸ್ ವಿರುದ್ದ ವಾಗ್ದಾಳಿ: ಶಿವಮೊಗ್ಗದಲ್ಲಿ ಅಭಿವೃದ್ಧಿ ಮಂತ್ರ ಪಠಿಸಿದ ಪ್ರಧಾನಿ ಮೋದಿ.

ಶಿವಮೊಗ್ಗ,ಫೆಬ್ರವರಿ,27,2023(www.justkannada.in): ಮಲೆನಾಡ ಅಭಿವೃದ್ಧಿಗೆ ನಮ್ಮ ಡಬಲ್ ಇಂಜಿನ್  ಸರ್ಕಾರ ಬದ್ಧವಾಗಿದೆ. ಬಡವರ ಪರ ಕೆಲಸ ಮಾಡುತ್ತಿದ್ದು, ಅಭಿವೃದ್ಧಿಯ ರಥ ಹಳ್ಳಿ ಹಳ್ಳಿಗೂ ತಲುಪಲಿ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ನೂತನ ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿ ಎಲ್ಲಾ ಸಹೋದರ ಸಹೋದರಿಯರಿಗೆ  ನನ್ನ ನಮಸ್ಕಾರ, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಹೇಳಿದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಹುಟ್ಟುಹಬ್ಬದ ಶುಭಕೋರಿದ ಪ್ರಧಾನಿ ಮೋದಿ, ಇಂದು ಬಿಎಸ್ ವೈ ಹುಟ್ಟುಹಬ್ಬದ ದಿನವಾಗಿದೆ. ಇದು ಇಂದು ಮತ್ತೊಂದು ವಿಶೇಷ ದಿನವಾಗಿದೆ.  ಬಿಎಸ್ ವೈ ವಿದಾಯದ ಭಾಷಣ ಮಾಡಿದ್ದರು. ಅವರು 50 ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದಾರೆ.  ಕರ್ನಾಟಕ ಅಭಿವೃದ್ದಿಯ ರಥದಂತೆ ಸಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ಅಭಿವೃದ್ದಿಯ ರಥ ಹಳ್ಳಿ ಹಳ್ಳಿಗೆ ತಲುಪಲಿ.  ಈ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಭಾರತದತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ.  ಗ್ರಾಮೀಣ ಸಣ್ಣನಗರಗಳು ವಿಕಾಸವಾಗುತ್ತಿವೆ  2014ರ ಮೊದಲು ಏರ್ ಇಂಡಿಯಾ ಬಗ್ಗೆ ಚರ್ಚೆಯಾಗಿತ್ತು.  ಏರ್ ಇಂಡಿಯಾ ಬಗ್ಗೆ ನಕರಾತ್ಮಕ ಚರ್ಚೆಯಾಗಿತ್ತು. ಇಂದು ಏರ್ ಇಂಡಿಯಾ ಭಾರತದ ಹೊಸ ಶಕ್ತಿ ಏರ್ ಇಂಡಿಯಾದ ಕಹಳೆ ಜಗತ್ತಿನಾದ್ಯಂತ ಮೊಳಗಿದೆ ಎಂದು ಶ್ಲಾಘಿಸಿದರು.

ಹಳ್ಳಿ ಹಳ್ಳಿಗೂ ವಿಮಾನ ನಿಲ್ದಾಣ ಸಂಪರ್ಕವಾಗಬೇಕು. ಬಡವನೂ ಸಹ ಏರ್ ಪೋರ್ಟ್ ನಲ್ಲಿ ಓಡಾಡಬೇಕು.  ಸ್ವತಂತ್ರ ಬಂದ ಬಳಿಕ 74 ಏರ್ ಪೋರ್ಟ್ ಇತ್ತು. ಈಗ ಬಿಜೆಪಿ ಸರ್ಕಾರ ಬಂದ ಬಳಿಕ ದೇಶದಲ್ಲಿ 74 ಹೊಸ ಏರ್ ಪೋರ್ಟ್ ನಿರ್ಮಿಸಿದ್ದೇವೆ. ವಿಮಾನಯಾನ ಕ್ಷೇತ್ರ ಬಹಳಷ್ಟು ಅಭಿವೃದ್ದಿ ಹೊಂದಿದೆ. 2014ರ ಹಿಂದೆ ಕೇವಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಏರ್ ಪೋರ್ಟ್ ಸೀಮಿತವಾಗಿತ್ತು. ಬಿಜೆಪಿ ಬಂದ ಬಳಿಕ ಸಣ್ಣ ಪುಟ್ಟ ನಗರಗಳಿಗೂ ಏರ್ ಪೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದೆ. ಮಲೆನಾಡ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದರು.

ಸಣ್ಣ ಸಣ್ಣ ನಗರಗಳನ್ನ ಕಾಂಗ್ರೆಸ್ ನಿರ್ಲಕ್ಷ್ಯಿಸಿತ್ತು. ಕಾಂಗ್ರೆಸ್ ನವರು ಅಭಿವೃದ್ಧಿ ಮಾಡಲೇ ಇಲ್ಲ.  ಆದರೆ ಬಡವರ ಪರ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಈಸೂರು ಗ್ರಾಮದ ಜನರ ಧೈರ್ಯ ನೆನೆದ ಪ್ರಧಾನಿ ಮೋದಿ, ಆಂಗ್ಲರ ವಿರುದ್ಧ ಈಸೂರು ಜನರು ಹೋರಾಡಿದರು. ಉಸಿರು ಬಿಟ್ಟರೂ ಈಸೂರು ಬಿಡಲ್ಲ ಎಂದರು ಎಂದು ಸ್ಮರಿಸಿದರು.

ಶಿವಮೊಗ್ಗ ಪಶ್ಚಿಮ ಘಟ್ಟದಲ್ಲಿ ಮಲೆನಾಡಿನ ಹೆಬ್ಬಾಗಿಲು. ಶಿವಮೊಗ್ಗ ಜಿಲ್ಲೆಯಲ್ಲಿ ನದಿ ವನ್ಯಸಂಪತ್ತು ಅದ್ಭುತವಾಗಿದೆ. ಇಲ್ಲಿ ಜೋಗ್ ಜಲಪಾತ, ಆನೆಗಳ ಬಿಡಾರವೂ ಇದೆ. ಆಗುಂಬೆ ಸೂರ್ಯಾಸ್ತವನ್ನ ಮರೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಬಣ್ಣಿಸಿದರು.

Key words: PM -Modi – development  – Shimoga-airport