ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿದ ಪ್ರಧಾನಿ ಮೋದಿ..

ನವದೆಹಲಿ,ಜುಲೈ,20,2023(www.justkannada.in): ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನ ಬೆತ್ತಲೆ ಮೆರವಣಿಗೆಯ ಮಾಡಿರುವ  ಘಟನೆ ನಡೆದಿದ್ದು ಈ ಘಟನೆಗೆ ಇಡೀ ದೇಶದಲ್ಲೇ ಖಂಡನೆ ವ್ಯಕ್ತವಾಗಿದೆ.

ಮಣಿಪುರದಲ್ಲಿ ಮೂರು ತಿಂಗಳುಗಳ ಹಿಂದೆ ಇಬ್ಬರು ಆದಿವಾಸಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಅವರನ್ನು ನಡೆಯಿಸಿಕೊಂಡು ಮೆರವಣಿಗೆ ಮಾಡಿರುವ  ಅಘಾತಕಾರಿ ಘಟನೆ ನಡೆದಿದ್ದು, ಈ ಸಂಬಂಧ ಓರ್ವ ಆರೋಪಿಯನ್ನ ಬಂಧಿಸಿ ಮಣಿಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇ 4ರಂದು ನಡೆದಿದ್ದ ಈ ಘಟನೆಯ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ್ದವು. ಈ ವಿಡಿಯೋಗಳು ಹೊರಬರುತ್ತಲೇ ದೇಶಾದ್ಯಂತ ಘಟನೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಘಟನೆ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಣಿಪುರ ಘಟನೆಯಿಂದ ಬಹಳ ನೋವಾಗಿದೆ ಇಂತಹ ಪಾಪ ಹೀನಾಯ ಕೃತ್ಯವನ್ನ ಸಹಿಸಲ್ಲ. ಮಹಿಳೆಯರ ರಕ್ಷಣೆಗೆಗಾಗಿ ಕಠಿಣ ಕಾನೂನು ಜಾರಿಗೆ ತನ್ನಿ  ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದರು.

ಘಟನೆಯಲ್ಲಿನ ಎಲ್ಲಾ ಪಾಪಿಗಳಿಗೂ ತಕ್ಕ ಶಿಕ್ಷೆಯಾಗುತ್ತೆ.  ಯಾವುದೇ ಮೂಲೆಯಲ್ಲಿದದರೂ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Key words: PM Modi -condemned – women -Manipur.