ನವದೆಹಲಿ,ಮೇ,10,2025 (www.justkannada.in): ಭಾರತ- ಪಾಕಿಸ್ತಾನ ನಡುವೆ ದಾಳಿ ಮುಂದುವರೆದಿದ್ದು ಪಾಕ್ ಮೇಲೆ ಭಾರತೀಯ ಸೇನೆ ದಾಳಿ ತೀವ್ರಗೊಳಿಸಿದ ಬೆನ್ನಲ್ಲೆ ಮೂರು ಸೇನಾ ಪಡೆ ಮುಖ್ಯಸ್ಥರು ಪ್ರಧಾನಿ ಮೋದಿ ಅವರನ್ನ ಭೇಟಿಯಾಗಿದ್ದಾರೆ.
ಪ್ರಧಾನಿ ಮೋದಿ ಅವರ ನಿವಾಸಕ್ಕೆ 3 ಸೇನಾಪಡೆಗಳ ಮುಖ್ಯಸ್ಥರು ಭೇಟಿ ನೀಡಿದ್ದು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಡಿಎಸ್ ಅನಿಲ್ ಚೌಹಾಣ್ ಸಹ ಉಪಸ್ಥಿತರಿದ್ದಾರೆ.
ಪಾಕ್ ಜೊತೆಗಿನ ಸಂಘರ್ಷದ ಬಗ್ಗೆ ಚರ್ಚೆ ನಡೆಸಿದ್ದು, ದಾಳಿ ಕುರಿತು ಪ್ರಧಾನಿ ಮೋದಿ ಮಾಹಿತಿ ಪಡೆದುಕೊಂಡಿದ್ದು, ಭಾರತದ ಮುಂದಿನ ಹೆಜ್ಜೆ ಏನು ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
Key words: PM Modi, meets, discusses, three army chiefs