ನಾವು ಪ್ರಧಾನಿ ಮೋದಿ ಆಡಳಿತ ಮೆಚ್ಚಿ ಬಂದಿದ್ದೇವೆ: ಮುಂದೆ ಯಾರೇ ಸಿಎಂ ಆದ್ರೂ ಆತಂಕ ಇಲ್ಲ-ಎಂಟಿಬಿ ನಾಗರಾಜ್.

ಬೆಂಗಳೂರು,ಜುಲೈ,27,2021(www.justkannada.in):  ನಾವು ಪ್ರಧಾನಿ ಮೋದಿ, ಬಿಎಸ್ ವೈ ಆಡಳಿತ ಮೆಚ್ಚಿ ಬಿಜೆಪಿಗೆ ಬಂದಿದ್ದೇವೆ. ಹೀಗಾಗಿ ಮುಂದೆ ಯಾರೇ ಸಿಎಂ ಆದರೂ ಆತಂಕವಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.jk

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಎಂಟಿಬಿ ನಾಗರಾಜ್, ನಾವು ಯಾವುದೇ ಆತಂಕದಲ್ಲಿಲ್ಲ ಖುಷಿಯಲ್ಲಿ ಇದ್ದೇವೆ.  ಮುಂದೆ ಯಾರೇ ಸಿಎಂ ಆದರೂ ಆತಂಕವಿಲ್ಲ. ಉತ್ತಮ ಆಡಳಿತ ನಡೆಸುವವರನ್ನ ಸಿಎಂ ಮಾಡಬೇಕು.  ಸಂಪುಟ ರಚನೆ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇಲ್ಲ. ಬಿಜಪಿ ಹೈಕಮಾಂಢ್ ನಿರ್ಧಾರಕ್ಕೆ ಬದ್ಧ ಎಂದರು.cabinet-expansion-mtb-nagaraj-cm-high-command

ಬಿಎಸ್ ವೈ ಬಿಜೆಪಿಯಲ್ಲಿ 50 ವರ್ಷಗಳ ಕಾಲ ದುಡಿದರು.  ರಾಜಕೀಯದಲ್ಲಿ ಏಳುಬೀಳು ಕಂಡಿದ್ದಾರೆ. ಹೀಗಾಗಿ ರಾಜೀನಾಮೆ ವೇಳೆ ಭಾವುಕರಾಗಿದ್ದಾರೆ ಅಷ್ಟೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು. ಇನ್ನು ಹೆಚ್.ವಿಶ್ವನಾಥ್ ವೈಯಕ್ತಿಕ ಹೇಳಿಕೆ ನೀಡಿದ್ದಾರೆ.  ನಮಗೆ ಸಚಿವ ಸ್ಥಾನ ಕೊಟ್ಟರೂ ಸಂತೋಷ, ಕೊಡದಿದ್ದರೂ ಸಂತೋಷ. ನಾವು 17 ಶಾಸಕರು ಒಟ್ಟಾಗಿದ್ದೇವೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

Key words: PM-Modi –administration-NO-worried -about –CM-MTB Nagaraj.