Thursday, August 20, 2026

BDA Apartments

Home Front Page ಪ್ರಧಾನಿ ಮೋದಿ ಅವರ 2ನೇ ಅವಧಿ 2ನೇ ವರ್ಷ ಪೂರೈಕೆ ಹಿನ್ನೆಲೆ: ಮೈಸೂರು ನಗರ ಬಿಜೆಪಿ...

ಪ್ರಧಾನಿ ಮೋದಿ ಅವರ 2ನೇ ಅವಧಿ 2ನೇ ವರ್ಷ ಪೂರೈಕೆ ಹಿನ್ನೆಲೆ: ಮೈಸೂರು ನಗರ ಬಿಜೆಪಿ ವತಿಯಿಂದ ಸೇವಾ ಚಟುವಟಿಕೆ…

ಮೈಸೂರು,ಮೇ,28,2021(www.justkannada.in): ಮೇ 30ಕ್ಕೆ ಪ್ರಧಾನಿ ನರೇಂದ ಮೋದಿಯವರ 2ನೇ ಅವಧಿ ಎರಡನೇ ವರ್ಷ ಪೂರೈಸುವ  ಹಿನ್ನೆಲೆ ನಗರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೇವಾ ಚಟುವಟಿಕೆ ಆಯೋಜಿಸಲಾಗಿದೆ.jk

ಈ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ, ಪ್ರಧಾನಿ ನರೇಂದ್ರ ಮೋದಿ ಅವರು 2ನೇ ಅವಧಿಯ 2ನೇ ವರ್ಷ ಪೂರೈಸಿರುವ ಹಿನ್ನೆಲೆ ಸೇವಾ ಚಟುವಟಿಕೆ. ಹಮ್ಮಿಕೊಳ್ಳಲಾಗಿದೆ. ಕೋವಿಡ್ ಮಹಾಮಾರಿ ವ್ಯಾಪಿಸುತ್ತಿರುವ ಹಿನ್ನೆಲೆ ಪ್ರತಿ ಬೂತ್ ನಲ್ಲಿ ಸೇವಾ ಚಟುವಟಿಕೆ ನಡೆಸಲಾಗುತ್ತದೆ.

ನಗರದ 854 ಬೂತ್ ಗಳಲ್ಲಿ ರಕ್ತದಾನ ಶಿಬಿರ, ಮಾಸ್ಕ್ ವಿತರಣೆ, ಸ್ಯಾನಿಟೈಸರ್ ವಿತರಣೆ, ಆಹಾರ ಮತ್ತು ದಿನಸಿ ಕಿಟ್ ಹಾಗೂ ಮೆಡಿಸಿನ್ ಕಿಟ್ ವಿತರಣೆ ಮಾಡಲಾಗುತ್ತದೆ. ಬೂತ್ ಮಟ್ಟದ ಕಾರ್ಯಕರ್ತರಿಂದ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಟಿ ಎಸ್ ಶ್ರೀವತ್ಸ ತಿಳಿಸಿದರು.

Key words: PM Modi-2nd term – 2nd year –   Service Activities – Mysore- BJP