ಇವರ ನಾಯಕರೇ ಡಿಸಿ ವಿರುದ್ದ ಮಾತನಾಡಿದಾಗ ಎಲ್ಲೊಗಿದ್ರು- ಎಂ. ಲಕ್ಷ್ಮಣ್ ವಿರುದ್ಧ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕಿಡಿ..

ಮೈಸೂರು,ಮೇ,28,2021(www.justkannada.in):  ಬಿಜೆಪಿ ನಾಯಕರ ವಿರುದ್ಧ ಪದೇ ಪದೇ ಟೀಕಿಸುತ್ತಿರುವ ಹಿನ್ನೆಲೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕಿಡಿಕಾರಿದ್ದಾರೆ.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ್, ಎಂ. ಲಕ್ಷ್ಮಣ್ ಕಳೆದ ಮೂರ್ನಾಲ್ಕು ತಿಂಗಳಿಂದ  ಪದೇ ಪದೇ  ಬಿಜೆಪಿ ನಾಯಕರ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಏನು ಬೇಕಾದರೂ ಮಾತನಾಡಬಹುದಾ.? ಕಾಲಲ್ಲಿರುದನ್ನು ಕೈಗೆ ತಗೊತೇನೆ ಎಂದು ಹೇಳಿದ್ದಾರೆ. ಚಪ್ಪಲೀಲಿ ಹೊಡಿತೀನಿ ಎಂದು ಹೇಳಿರುವುದು ಅಪರಾಧ. ನಮ್ಮ ನಾಯಕರ ಬಗ್ಗೆ ಮಾತನಾಡಿದಾಗ ನಾವೇಷ್ಟು ರೊಚ್ಚಿಗೇಳಬೇಕು. ಅವರು ಮಾತನಾಡುವ ಶೈಲಿ ಎಷ್ಟು ಸರಿ. ಮೋದಿ ಕೊಲೆಗಡುಕ, ಕಳ್ಳ ಎಂತೆಲ್ಲ ಮಾತನಾಡುವುದು ಸರಿಯೇ. ಎಲ್ಲದಕ್ಕೂ ಅಧಾರ ಇಟ್ಟುಕೊಂಡು ಮಾತಾನಾಡುತ್ತಾರೆಯೇ..? ಸಾರ್ವಜನಿಕರಿಗೆ ಬಿಜೆಪಿ ಬಗ್ಗೆ ಅನುಮಾನ ‌ಮೂಡಿಸುವ ಪ್ರಯತ್ನ ಇದು ಎಂದು ಹರಿಹಾಯ್ದರು.

ಇವರ ನಾಯಕರೇ ಡಿಸಿ ವಿರುದ್ದ ಮಾತನಾಡಿದಾಗ ಎಲ್ಲೊಗಿದ್ರು. ಮೈಸೂರಿನ ಮೂರನೇ ರಾಣಿ ಅಂತ ಅವಹೇಳನ‌ಮಾಡಿದಾಗ ಅವತ್ತು ಲಕ್ಷ್ಮಣ್ ಎಲ್ಲೊಗಿದ್ರಿ. ಇದು ಸಮಯಸಾಧಕತನದ ಪರಮಾವಧಿ. ನಾನು ನಗರ ಅಧ್ಯಕ್ಷನಾಗಿ ಮಾತನಾಡಬೇಕಾದ ಅನಿವಾರ್ಯತೆ  ಎದುರಾಗಿದೆ ಎಂದ ಶ್ರೀವತ್ಸ ತಿಳಿಸಿದರು.

Key words : BJP- city-President –Shrivtsa-kpcc-spokesperson-M.Lakshman