ಫೋನ್ ಟ್ಯಾಪಿಂಗ್ ತನಿಖೆ ಸಿಬಿಐಗೆ: ಐ ಸೋ ಹ್ಯಾಪಿ ಎಂದ ಎಚ್ವಿ, ತನಿಖೆಗೆ ಅಂತಾರಾಷ್ಟ್ರೀಯ ಮಟ್ಟದ ನೆರವು ಪಡೆಯಲಿ ಎಂಬ ಎಚ್ಡಿಕೆ

ಬೆಂಗಳೂರು, ಆಗಸ್ಟ್ 18, 2019 (www.justkannada.in): ಪೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ.
ಐ ಆಮ್ ಸೋ ಹ್ಯಾಪಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಒಂದು ಸಾಂವಿಧಾನಿಕ ಸಂಸ್ಥೆ. ಅಂತಹ ಸಂಸ್ಥೆಯಿಂದ ಇಂತಹ ಪ್ರತಿಷ್ಠಿತ ಪ್ರಕರಣ ತನಿಖೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

ಬೇಹುಗಾರಿಕ ಸಂಸ್ಥೆ ಮುಖ್ಯಮಂತ್ರಿಗಳ ಬಳಿ ಇರುತ್ತೆ‌. ಅವರ ಅಣತಿಯಂತೆ ಈ ಕೆಲಸ ನಡೆದಿದೆ. ತನಿಖೆಯಿಂದ ಎಲ್ಲಾ ಸತ್ಯಗಳು ಹೊರಬರಲಿದೆ. ಕುಂಬಳಕಾಯಿ ಕಳ್ಳ ಅಂದರೆ ಯಾಕೆ ಬೆನ್ನು ಮುಟ್ಟಿ ನೋಡಿಕೊಳ್ಳಬೇಕು ? ಯಾವುದೇ ವಿಚಾರವನ್ನು ನಾನು ಡೈವರ್ಟ್ ಮಾಡಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಎಚ್ವಿ ಟಾಂಗ್ ನೀಡಿದರು.

ಸಿದ್ದರಾಮಯ್ಯ ಸೇರಿ ಸಾಕಷ್ಟು ಕಾಂಗ್ರೆಸ್‌ ನಾಯಕರು ಸಿಬಿಐ ತನಿಖೆ ಆಗಲಿ ಅಂತಾ ಒಕ್ಕೊರಲಿನಿಂದ ಒತ್ತಾಯ ಮಾಡಿದ್ದಾರೆ. ಈ ವಿಚಾರವನ್ನು ಮೊದಲು ಪ್ರಸ್ತಾಪ ಮಾಡಿದ್ದೆ ನಾನು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ ಎಂದು ಹೇಳಿದರು.

ಜೆಡಿಎಸ್ ನೆರವು ನೀಡಲಿದೆ: ಎಚ್ಡಿಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪೋನ್ ಟ್ಯಾಪಿಂಗ್ ‌ಪ್ರಕರಣದ ಬಗ್ಗೆ ಸಿಬಿಐ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದ ನೆರವು ಪಡೆದು ತನಿಖೆ ನಡೆಸಲಿ ಅದಕ್ಕೆ ಜೆಡಿಎಸ್ ಸಂಪೂರ್ಣ ಸಹಕಾರ‌ ನೀಡುತ್ತದೆ ಎಂದು ಎಚ್ಡಿಕೆ ಹೇಳಿದ್ದಾರೆ.