ರಾಜ್ಯದಲ್ಲಿ ಪಿಎಫ್ ಐಗೆ ಬಲ ಬಂದ್ರೆ ಮತ್ತಷ್ಟು ಅರಾಜಕತೆ ಸೃಷ್ಟಿಯಾಗುತ್ತೆ- ಸಿ.ಟಿ ರವಿ.

ಬೆಂಗಳೂರು,ಮೇ,15,2023(www.justkannada.in): ರಾಜ್ಯದಲ್ಲಿ ಪಿಎಫ್ ಐಗೆ ಬಲ ಬಂದ್ರೆ ಯಾರಿಗೆ ನೆಮ್ಮದಿ ಇರುತ್ತದೆ. ಮತ್ತಷ್ಟು ಅರಾಜಕತೆ ಸೃಷ್ಟಿಯಾಗಿ ಅವಾಂತರಗಳು ಉಂಟಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ ರವಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಬಳಿಕ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ.ರವಿ, ಪಿಎಫ್ ಐಗೆ ಬಲ ನೀಡಿದರೇ  ಡಿಜೆಹಳ್ಳಿ,  ಕೆಜೆ ಹಳ್ಳಿಯಂತಹ ನೂರಾರು ಕೇಸ್ ಗಳು ಬೆಳಕಿಗೆ ಬರುತ್ತದೆ.  ತಾತ್ಕಾಲಿಕವಾಗಿ ಕಾಂಗ್ರೆಸ್ ಗೆ ಲಾಭ ಸಿಗುತ್ತೆ ಅಷ್ಟೆ. ಹನಿಮೂನ್ ಅವಧಿ ಇರೋವರೆಗೂ ಎಲ್ಲವೂ ಚೆನ್ನಾಗಿರುತ್ತೆ ಅ ಮೇಲೆ ಏನಾಗುತ್ತೆ ಅಂತಾ ಗೊತ್ತಿದೆ ಅಲ್ವಾ..?  ಕಾಂಗ್ರೆಸ್ ಮೊದಲ ಸಂಪುಟದಲ್ಲೇ  ಗ್ಯಾರಂಟಿ ಘೋಷಿಸಬಹುದು. ಕಾಂಗ್ರೆಸ್ ನೋಟ್ ಪ್ರಿಂಟಿಂಗ್ ಮಷಿನ್ ತಂದಿಟ್ಟುಕೊಳ್ಳಬಹುದು ಎಂದು ಹೇಳಿದರು.

ಈ ಬಾರಿಯ ಚುನಾವಣೆ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ನಾವು ಸೈದ್ಧಾಂತಿಕ ಹೋರಾಟ ಮುಂದುವರಿಸುತ್ತೇವೆ. ಜೆಡಿಎಸ್ ​ನವರು ಕಾಂಗ್ರೆಸ್ ಪಕ್ಷಕ್ಕೆ ಸಪೋರ್ಟ್ ಮಾಡಿದ್ದಾರೆ. ಕಾಂಗ್ರೆಸ್ ಒಳ್ಳೆಯ ಆಡಳಿತ ಕೊಡಲಿ ಎಂಬುದು ನಮ್ಮ ಅಪೇಕ್ಷೆ. 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ಹಣ, 10 ಕೆಜಿ ಅಕ್ಕಿ ಕೊಡೋದು ಒಳ್ಳೆಯದಲ್ವಾ. ಈಗಲೇ ಪ್ರತಿಕ್ರಿಯೆ ನೀಡುವುದು ಬೇಡ, ಕಾದು ನೋಡೋಣ ಎಂದರು.

Key words:  PFI – state-congress-bjp- CT Ravi