Friday, September 18, 2026

BDA Apartments

ಜೂನ್ ಅಂತ್ಯದೊಳಗೆ ATM, UPI ಮೂಲಕ PF ಹಣ ವಿತ್ ಡ್ರಾ ಸೌಲಭ್ಯ BDA JK_Adv BDA Adv
Home Front Page ಜೂನ್ ಅಂತ್ಯದೊಳಗೆ ATM, UPI ಮೂಲಕ PF ಹಣ ವಿತ್ ಡ್ರಾ ಸೌಲಭ್ಯ

ಜೂನ್ ಅಂತ್ಯದೊಳಗೆ ATM, UPI ಮೂಲಕ PF ಹಣ ವಿತ್ ಡ್ರಾ ಸೌಲಭ್ಯ

ನವದೆಹಲಿ, ಜೂನ್,18,2026 (www.justkannada.in): ಪಿಎಫ್ ಸೌಲಭ್ಯ ಪಡೆಯುತ್ತಿರುವ, ಕಾರ್ಮಿಕರು  ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಲು ಮುಂದಾಗಿದೆ.  ಇನ್ಮುಂದೆ ಪಿಎಫ್  ಹಣವನ್ನು ಎಟಿಎಂ ಮತ್ತು ಯುಪಿಐ ಆ್ಯಪ್‌ ಗಳ ಮೂಲಕ ಸುಲಭವಾಗಿ ಹಿಂಪಡೆಯಬಹುದಾಗಿದೆ.

ಹೌದು ಜೂನ್ ತಿಂಗಳ ಅಂತ್ಯದಿಂದ ಯುಪಿಐ, ಎಟಿಎಂ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದಿಂದ ಮಾಹಿತಿ ಲಭ್ಯವಾಗಿದೆ.  ಈ ನೂತನ ಸೌಲಭ್ಯವು ಜೂನ್ ತಿಂಗಳ ಅಂತ್ಯದ ವೇಳೆಗೆ ಅಧಿಕೃತವಾಗಿ ಜಾರಿಗೆ ಬರುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೂಡ ಈ ಯೋಜನೆಯ ಜಾರಿ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದ್ದರು.ಜೂನ್ ಅಂತ್ಯದೊಳಗೆ ATM belagavi

ಇಪಿಎಫ್‌ಒ ಬಳಕೆದಾರರು ತಮ್ಮ ಇಪಿಎಫ್ ಬ್ಯಾಲೆನ್ಸ್‌ ನಲ್ಲಿನ ಶೇಕಡಾ 75 ರಷ್ಟು ಮೊತ್ತವನ್ನು ಎಟಿಎಂ ಮತ್ತು ಯುಪಿಐ ಮೂಲಕ ತಕ್ಷಣವೇ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಈ ಕ್ರಾಂತಿಕಾರಿ ನಿರ್ಧಾರದಿಂದಾಗಿ ಪಿಎಫ್ ಹಣ ಪಡೆಯಲು ಇದ್ದ ದೀರ್ಘಾವಧಿಯ ಪೇಪರ್‌ವರ್ಕ್‌  ಮತ್ತು ವಿಳಂಬ ನೀತಿಗೆ ಮುಕ್ತಿ ಸಿಗಲಿದೆ.UPI ಮೂಲಕ PF ಹಣ ವಿತ್ ಡ್ರಾ ಸೌಲಭ್ಯ BDA JK_Adv BDA Adv

ಕಾರ್ಮಿಕರು, ಉದ್ಯೋಗಿಗಳು  ಪಿಎಫ್ ಹಣವನ್ನು ಹಿಂಪಡೆಯಲು ಆನ್‌ ಲೈನ್ ಅಥವಾ ಆಫ್‌ ಲೈನ್ ಮೂಲಕ ಕ್ಲೈಮ್‌ ಗಳನ್ನು ಸಲ್ಲಿಸಿ, ಅದು ಪ್ರಕ್ರಿಯೆಗೊಳ್ಳುವವರೆಗೆ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು.atm upi jk02_new jk02 new

Key words: PF, money, withdrawal, ATM, UPI