ವಾಹನ ಸವಾರರಿಗೆ ಶಾಕ್: ದೇಶದಲ್ಲಿ ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ.

ಬೆಂಗಳೂರು,ಅಕ್ಟೋಬರ್,15,2021(www.justkannada.in):  ಆಯುಧ ಪೂಜಾ, ವಿಜಯ ದಶಮಿ ಹಬ್ಬದ ಸಂಭ್ರಮದಲ್ಲಿರುವ  ವಾಹನ ಸವಾರರಿಗೆ ಶಾಕ್,  ಹೌದು, ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗುವ ಮೂಲಕ ಕಹಿಸುದ್ದಿ ಸಿಕ್ಕಿದೆ.

ಬೆಂಗಳೂರಿನಲ್ಲಿ‌ ಇಂದು ಲೀಟರ್‌ ಪೆಟ್ರೋಲ್‌ 36 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್‌ ಬೆಲೆಯಲ್ಲಿ 37 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 108.80ಕ್ಕೇರಿದರೇ, ಡೀಸೆಲ್‌ ಬೆಲೆ 99.63ಕ್ಕೇರಿದೆ. ಕಳೆದ 10 ದಿನಗಳಲ್ಲಿ ಪೆಟ್ರೋಲ್‌ ದರ 2.92 ಹೆಚ್ಚಳವಾಗಿದೆ.

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 111.05ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 101.74 ರೂ ಗೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 105.39ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 96.59 ರೂ ಗೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Petrol- diesel- prices- up- again