ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಸಿದ್ದರಾಮಯ್ಯ ಸರ್ಕಾರ ತೆರಿಗೆ ಕಡಿತ ಮಾಡಲಿ- ಬಿ.ವೈ ವಿಜಯೇಂದ್ರ

ಬೆಂಗಳೂರು,ಮೇ,23,2026 (www.justkannada.in):  ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ವಿಚಾರಕ್ಕೆ ಸಂಬಂಧಿಸಿದಂತೆ  ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆ ಆಗಿದೆ.  ಸಿಎಂ ಸಿದ್ದರಾಮಯ್ಯನವರ ಸರ್ಕಾರ ತೆರಿಗೆಯನ್ನ ಕಡಿತ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯನವರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನ ಕಡಿತ ಮಾಡಲಿ. ಪ್ರಿಯಾಂಕ್ ಖರ್ಗೆ ಗೆ ಒಂದು ಕಿವಿಮಾತು ಅಂತರಾಷ್ಟ್ರೀಯ, ರಾಷ್ಟ್ರೀಯ ವಿಚಾರಗಳನ್ನ ಬದಿಗಿಟ್ಟು ದೇಶಕ್ಕೆ  ಮಾದರಿಯಾಗುವಂತಹ ಈ ರಾಜ್ಯದ ಬಗ್ಗೆ ನಿರ್ಧಾರ ಮಾಡಿ. ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಸಿಎಂಗೆ ಮೊದಲು ಬುದ್ದಿ ಹೇಳಿ ಎಂದು ಕುಟುಕಿದರು.

ಬೆಂಗಳೂರು ಹೊರ ವಲಯದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಸಿದ್ದರಾಮಯ್ಯ, ಕಾಂಗ್ರೆಸ್ ಗೆ ರೈತರ ವಿಚಾರದಲ್ಲಿ ಯಾಕೆ ಇಷ್ಟು ಕೋಪ? ಬೆಂಗಳೂರಿನಲ್ಲಿ ಸಾವಿರಾರು ಎಕರೆ ಒಕ್ಕಲೆಬ್ಬಿಸಿ ತೊಂದರೆ ಕೊಡುತ್ತಿದ್ದಾರೆ.  ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ಗೆ ಇಳಿದಿದೆ. ಬಿಜೆಪಿ ರೈತರ ಪರವಾಗಿರಲಿದೆ.  ಒಕ್ಕಲೆಬ್ಬಿಸಲು ಬಿಡಲ್ಲ ಎಂದರು.

Keyu words: Petrol, diesel, prices, rise, Siddaramaiah, taxes, BY Vijayendra