ಬಿಎಂಟಿಸಿ ಬಸ್ ನಲ್ಲಿ ಕುಳಿತಲ್ಲೇ ಸಾವಿಗೀಡಾದ ವ್ಯಕ್ತಿ.

ಬೆಂಗಳೂರು,ಮಾರ್ಚ್,8,2023(www.justkannada.in): ಬಿಎಂಟಿಸಿ ಬಸ್ ನಲ್ಲಿ  ಪ್ರಯಾಣಿಸುವಾಗ ಕುಳಿತಲ್ಲೇ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಪಿ ಅಬ್ದುಲ್ ಖಾದಿರ್(61) ಮೃತಪಟ್ಟ ವ್ಯಕ್ತಿ. ಬಿಎಂಟಿಸಿ ಬಸ್ ನಲ್ಲಿ ಯಶವಂತಪುರದಿಂದ ಮೆಜೆಸ್ಟಿಕ್ ಗೆ ಬರುತ್ತಿದ್ದ ವೇಳೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಖಾದಿರ್ ಗೆ ಹೃದಯಾಘಾತವಾಗಿದೆ. ಮಂತ್ರಿ ಮಾಲ್ ಬಳಿ ಬರುತ್ತಿದ್ದಂತೆ ಅಬ್ದುಲ್ ಖಾದಿರ್ ಗೆ ಹಾರ್ಟ್ ಅಟ್ಯಾಕ್ ಆಗಿದ್ದು ಬಸ್ ನಲ್ಲಿ ಕುಳಿತಲ್ಲೇ ಪ್ರಾಣ ಚೆಲ್ಲಿದ್ದಾರೆ.

Key words:  person -died -sitting – BMTC -bus.