ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಅನುಮತಿ: ಕೇಂದ್ರ ಸಚಿವ ಡಿ.ವಿ ಸದಾನಂದಗೌಡರ ಕಾರ್ಯ ಸಾಧನೆ ಸ್ವಾಗತಿಸಿದ ಪೆರಿಕಲ್ ಎಂ. ಸುಂದರ್…

ಬೆಂಗಳೂರು,ಜನವರಿ,23,2021(www.justkannada.in):  ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಅನುಮತಿ ನೀಡಿದ ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ ಸದಾನಂದ ಗೌಡರ ಕಾರ್ಯ ಸಾಧನೆಯನ್ನು ಎಫ್‍ಕೆಸಿಸಿಐ ಅಧ್ಯಕ್ಷರಾದ  ಪೆರಿಕಲ್ ಎಂ. ಸುಂದರ್ ಸ್ವಾಗತಿಸಿದ್ದಾರೆ. jk

ಕರ್ನಾಟಕ ರಾಜ್ಯದ ಪ್ರಸ್ತಾವನೆ ಮೇರೆಗೆ ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿರುವ ರಾಸಾನಿಯಕ ಮತ್ತು ಪೆಟ್ರೋಕೆಮಿಕಲ್ ಇಲಾಖೆಯು ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಪುರಸ್ಕರಿಸಿ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಅನ್ನು ಸ್ಥಾಪಿಸಲು ಅನುಮೋದನೆ ನೀಡಿದ್ದು, ಈ ಬಗ್ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

permission-establish-plastic-park-f-kcci-president-perikal-m-sundar-welcomed-union-minister-dv-sadananda-gowda
ಕೃಪೆ-internet

ಈ ಪ್ಲಾಸ್ಟಿಕ್ ಕೈಗಾರಿಕೆಗಳು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪ್ರಾಬಲ್ಯದೊಂದಿಗೆ ತಮ್ಮ ಜಾಲವನ್ನು ಹರಡಿಕೊಂಡಿದ್ದು ಈ ಪ್ಲಾಸ್ಟಿಕ್ ಪಾರ್ಕ್‍ನಿಂದಾಗಿ ಎಂಎಸ್‍ಎಂಇಗಳ ಬೆಳೆವಣಿಗೆಗೆ ಉತ್ತೇಜನಾ ಹಾಗೂ ಕರಾವಳಿ ಪ್ರದೇಶ ಜನರ ಆರ್ಥಿಕ ಪರಿಸ್ಥಿತಿಯನ್ನು ಪುನರುಜ್ಜೀವನಗೊಳಿಸಲು ಸಹಕಾರಿಯಾಗುತ್ತದೆ. ಈ ಯೋಜನೆ ಕರಾವಳಿ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿ ಮಾಡುವುದಲ್ಲದೆ ಆ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಹಾಗೂ ಮೂಲಭೂತ ಸೌಕರ್ಯಗಳ ಬೆಳೆವಣಿಗೆಗೆ ಸಹಾಯವಾಗಲಿದೆ ಎಂದು   ಪೆರಿಕಲ್ ಎಂ. ಸುಂದರ್ ತಿಳಿಸಿದ್ದಾರೆ.

Key words: Permission – establish – plastic park-F KCCI- President-Perikal M sundar- welcomed -Union Minister-DV Sadananda Gowda