Saturday, August 15, 2026

BDA Apartments

Home Front Page “ವಿಶ್ವನಾಥ್ ಒಂಟಿಯಾಗುವ ಪ್ರಶ್ನೆಯೇ ಇಲ್ಲ” : ಸಚಿವ ಎಸ್.ಟಿ.ಸೋಮಶೇಖರ್

“ವಿಶ್ವನಾಥ್ ಒಂಟಿಯಾಗುವ ಪ್ರಶ್ನೆಯೇ ಇಲ್ಲ” : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಜನವರಿ,23,2021(www.justkananda.in) : ವಿಶ್ವನಾಥ್ ಒಂಟಿಯಾಗುವ ಪ್ರಶ್ನೆಯೇ ಇಲ್ಲ. ಅವರು ಹೇಳಿದ ಎಲ್ಲಾ ಕೆಲಸವನ್ನು ಮಾಡಿಕೊಟ್ಟಿದ್ದೇವೆ. ಆ ಭಾವನೆ ಅವರಿಗೆ ಏಕೆ ಬಂದಿದೆ ಗೊತ್ತಿಲ್ಲ. ನಾವು 17 ಜನರು ಈಗಲೂ ಒಟ್ಟಾಗಿಯೇ ಇದ್ದೇವೆ. ಅವರು ಯಾವಾಗಲೇ ಬರಲಿ, ಏನಾದರೂ ಹೇಳಲಿ ಪ್ರತಿಕ್ರಿಯಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.jk

ವಿಶ್ವನಾಥ್ ನನ್ನನ್ನು ಒಂಟಿ ಮಾಡಿದ್ದಾರೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ವಿಶ್ವನಾಥ್ ಜೊತೆ ನಾನೇ ಖುದ್ದು ಮಾತನಾಡುತ್ತೇನೆ‌. ಅವರ ಒಂಟಿ ಭಾವನೆಯನ್ನು ದೂರ ಮಾಡುತ್ತೇನೆ ಎಂದಿದ್ದಾರೆ.

ನನ್ನ ಜೊತೆ ಮಾತನಾಡಿದರೆ ಯಡಿಯೂರಪ್ಪ ಬೇಸರ ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ದುಶ್ಮನ್ ಗಳ ಬಗ್ಗೆಯೂ ಆ ರೀತಿ ಭಾವನೆ ಹೊಂದಿಲ್ಲ ಎಂದು ಹೇಳಿದ್ದಾರೆ.

ಸಚಿವರುಗಳ ಪ್ರತ್ಯೇಕ ಸಭೆ

ಚಿಕ್ಕಮಗಳೂರಿನಲ್ಲಿ ನಡೆದ ಸಚಿವರುಗಳ ಪ್ರತ್ಯೇಕ ಸಭೆ ವಿಚಾರವಾಗಿ ಮಾತನಾಡಿ, ಅದು ಯಾವುದೂ ಪ್ರತ್ಯೇಕ ಸಭೆಯಲ್ಲ. ಊಟಕ್ಕೆ ಸೇರಿರುತ್ತಾರೆ, ಅದರಲ್ಲಿ ವಿಶೇಷತೆ ಏನು ಇಲ್ಲ. ಹೊಸದಾಗಿ ಸಚಿವರಾಗಿರುತ್ತಾರೆ, ಸ್ನೇಹಿತರು ಊಟಕ್ಕೆ ಕರೆದಿರುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ. ಸಚಿವರುಗಳ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದ ಎಂದಿದ್ದಾರೆ.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವಿಚಾರNo question,Vishwanath,being,alone,Minister,S.T. Somashekhar

ಯಾರೇ ಕಾನೂನು ಮೀರಿ ಗಣಿಗಾರಿಕೆ ನಡೆಸಿದರೆ ಅವರ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಖುದ್ದಾಗಿ ನಮಗೆ ಈ ವಿಚಾರದಲ್ಲಿ ಸೂಚನೆ ಕೊಟ್ಟಿದ್ದಾರೆ. ಪರವಾನಗಿ ಪಡೆದು ಗಣಿಗಾರಿಕೆ ನಡೆಸುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಕಾನೂನು ಗಾಳಿಗೆ ತೂರಿ ಗಣಿಗಾರಿಕೆ ನಡೆಸಿದರೆ ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

key words : No question-Vishwanath-being-alone-Minister-S.T. Somashekhar