Saturday, August 22, 2026

BDA Apartments

Home Front Page ಉಪಚುನಾವಣೆಯಲ್ಲಿ  ನಮ್ಮ ಕ್ಷೇತ್ರದ ಜನತೆ ನಮ್ಮನ್ನ ಗೆಲ್ಲಿಸುತ್ತಾರೆ- ಸುಪ್ರೀಂ ತೀರ್ಪಿನ ಬಳಿಕ ಅನರ್ಹ ಶಾಸಕ ಬಿ.ಸಿ...

ಉಪಚುನಾವಣೆಯಲ್ಲಿ  ನಮ್ಮ ಕ್ಷೇತ್ರದ ಜನತೆ ನಮ್ಮನ್ನ ಗೆಲ್ಲಿಸುತ್ತಾರೆ- ಸುಪ್ರೀಂ ತೀರ್ಪಿನ ಬಳಿಕ ಅನರ್ಹ ಶಾಸಕ ಬಿ.ಸಿ ಪಾಟೀಲ್ ವಿಶ್ವಾಸ…

ಬೆಂಗಳೂರು,ನ,13,2019(www.justkannada.in): ಸ್ಪೀಕರ್ ಆದೇಶ ಎತ್ತಿ ಹಿಡಿದು ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ  ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ತೀರ್ಪನ್ನ ಅನರ್ಹ ಶಾಸಕ ಬಿ.ಸಿ ಪಾಟೀಲ್ ಸ್ವಾಗತಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಿ.ಸಿ ಪಾಟೀಲ್, ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ. ಈ ಹಿಂದೆ ನಾನು ಮಂತ್ರಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ನಮ್ಮ ಕ್ಷೇತ್ರದ ಜನತೆ ಉಪಚುನಾವಣೆಯಲ್ಲಿ ನಮ್ಮನ್ನ ಗೆಲ್ಲಿಸುತ್ತೇರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಗೆಯೇ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅನರ್ಹ ಶಾಸಕ ಗೋಪಾಲಯ್ಯ,. ನಮಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಸುಪ್ರೀಂಕೋರ್ಟ್  ನೀಡಿರುವ ತೀರ್ಪು ಸ್ವಾಗತ ಎಂದು ಹೇಳಿದ್ದಾರೆ.

Key words:  people -our constituency -win -by-elections.-disqualified MLA- BC Patil