Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಪೆನ್ ಡ್ರೈವ್ ಪ್ರಕರಣ: ಎಸ್ ಐಟಿಗೆ ದೂರು ನೀಡಿದ ಜೆಡಿಎಸ್ ಶಾಸಕ.

ಪೆನ್ ಡ್ರೈವ್ ಪ್ರಕರಣ: ಎಸ್ ಐಟಿಗೆ ದೂರು ನೀಡಿದ ಜೆಡಿಎಸ್ ಶಾಸಕ.

ಬೆಂಗಳೂರು,ಮೇ,13,2024 (www.justkannada.in):  ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ, ಪೆನ್ ಡ್ರೈವ್  ವಿಡಿಯೋ ಹರಿಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ನವೀನ್ ಗೌಡ ವಿರುದ್ಧ ಇದೀಗ ಅರಕಲಗೂಡು ಜೆಡಿಎಸ್ ಶಾಸಕ ಎ.ಮಂಜು ಎಸ್‌ ಐಟಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಎಸ್‌ಐಟಿ ಕಚೇರಿಗೆ ಆಗಮಿಸಿ  ಶಾಸಕ ಎ.ಮಂಜು, ನವೀನ್ ಗೌಡ ವಿರುದ್ಧ ದೂರು ನೀಡಿದ್ದಾರೆ. ನವೀನ್ ಗೌಡ ಫೇಸ್ ಬುಕ್ ಖಾತೆಯಲ್ಲಿ ಅರಕಲಗೂಡು ಶಾಸಕ ಎ.ಮಂಜುಗೆ ಪೆನ್ ಡ್ರೈವ್ ನೀಡಿದ್ದೇನೆ. ಏಪ್ರಿಲ್ 21ರಂದು ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ಪೆನ್ ಡ್ರೈವ್ ನೀಡಿದ್ದು, ಮಂಜುಗೆ ಪೆನ್ ಡ್ರೈವ್ ಕೊಟ್ಟ ಬಳಿಕವೇ ವೈರಲ್ ಆಗಿದೆ ಎಂದು ಪೋಸ್ಟ್ ಹಾಕಿದ್ದನು.ಪೆನ್ ಡ್ರೈವ್ ಪ್ರಕರಣ: ಎಸ್ ಐಟಿಗೆ ದೂರು ನೀಡಿದ ಜೆಡಿಎಸ್ ಶಾಸಕ A.Manju

ಇದೀಗ ಈ ಸಂಬಂಧ ಜೆಡಿಎಸ್ ಶಾಸಕ ಎ.ಮಂಜು ಅವರು ನವೀನ್ ಗೌಡ ವಿರುದ್ದ ಎಸ್ ಐಟಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Key words: Pen drive-case- JDS MLA- complains-SIT