ಪೆನ್ ಡ್ರೈವ್ ಪ್ರಕರಣದ ಮಾಸ್ಟರ್ ಮೈಂಡ್ ಡಿಕೆಶಿ: ಡಿಸಿಎಂ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇಲ್ಲ- ಸಿ.ಪಿ ಯೋಗೇಶ್ವರ್

ರಾಮನಗರ,ಮೇ,8,2024 (www.justkannada.in): ಇಡೀ ಪೆನ್ ಡ್ರೈವ್ ಪ್ರಕರಣದ ಮಾಸ್ಟರ್ ಮೈಂಡ್ ಡಿಕೆ ಶಿವಕುಮಾರ್.  ಡಿಸಿಎಂ ಹುದ್ದೆಯಲ್ಲಿ ಅವರಿಗೆ ಮುಂದುವರೆಯುವ ನೈತಿಕತೆ ಇಲ್ಲ. ಮೊದಲು ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಒತ್ತಾಯಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಪಿ ಯೋಗೇಶ್ವರ್, ಪ್ರಜ್ವಲ್ ರೇವಣ್ಣ ವಿಚಾರವನ್ನ ನಾವೂ ಖಂಡಿಸುತ್ತೇವೆ.  ಉಪ್ಪು ತಿಂದವರು ನೀರು ಕುಡಿಯಲೇಬೇಕು. ಆದರೆ ವಿಡಿಯೋ ಹಂಚಿಕೆ ಮಾಡಿದ್ದು ಎಷ್ಟು ಸರಿ. ಸಂತ್ರಸ್ತೆಯರ ವಿಡಿಯೋ ಹಂಚಿಕೆ ಮಾಡಿರುವುದು ಎಷ್ಟು ಸರಿ. ಈ  ಹಿಂದೆ ಟೆಂಟ್ ನಲ್ಲಿ ಸಿನಿಮಾ ತೋರಿಸುತ್ತಿದ್ದರು ಇದೀಗ ಅದೇ ಪ್ರವೃತ್ತಿ ಮುಂದುವರೆಸಿದ್ದಾರೆ ಎಂದು ಗುಡುಗಿದರು.

ಹೆಚ್ ಡಿ ದೇವೇಗೌಡರ,  ಹೆಚ್ ಡಿ ಕುಮಾರಸ್ವಾಮಿ ಅವರ ತೇಜೋವಧೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷದಿಂದ ಪ್ರಾದೇಶಿಕ ಪಕ್ಷ ಬೇರ್ಪಡಿಸಿಲು  ಹುನ್ನಾರ ನಡೆಯುತ್ತಿದೆ. ಇಡೀ ಪ್ರಕರಣಕ್ಕೆ ಡಿಕೆ ಶಿವಕುಮಾರ್ ಮಾಸ್ಟರ್ ಮೈಂಡ್. ಡಿಕೆ ಶಿವಕುಮಾರ್ ಹೆಣ್ಣುಮಕ್ಕಳ ಗೌರವ ಹಾಳು ಮಾಡಿದ್ದಾರೆ. ಡಿಸಿಎಂ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಕೂಡಲೇ ರಾಜೀನಾಮೆ ನೀಡಲಿ ಈ ಪ್ರಕರಣವನ್ನ ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ವಹಿಸಲಿ. ಎಂದು ಆಗ್ರಹಿಸಿದರು.

Key words: Pen drive, case, DK Shivakumar, CP Yogeshwar