Monday, September 21, 2026

BDA Apartments

ಪಕ್ಷ ಎಲ್ಲವನ್ನೂ ನೀಡಿದೆ: ಬಿಜೆಪಿಯಲ್ಲಿ ಇದಕ್ಕಿಂತ ಇನ್ನೇನು ಬೇಕು –ಸಿಎಂ ಬಿ...
Home Front Page ಪಕ್ಷ ಎಲ್ಲವನ್ನೂ ನೀಡಿದೆ: ಬಿಜೆಪಿಯಲ್ಲಿ ಇದಕ್ಕಿಂತ ಇನ್ನೇನು ಬೇಕು –ಸಿಎಂ ಬಿಎಸ್ ವೈ ಪುತ್ರ ಬಿವೈ...

ಪಕ್ಷ ಎಲ್ಲವನ್ನೂ ನೀಡಿದೆ: ಬಿಜೆಪಿಯಲ್ಲಿ ಇದಕ್ಕಿಂತ ಇನ್ನೇನು ಬೇಕು –ಸಿಎಂ ಬಿಎಸ್ ವೈ ಪುತ್ರ ಬಿವೈ ರಾಘವೇಂದ್ರ

ಶಿವಮೊಗ್ಗ,ಜುಲೈ,22,2021(www.justkannada.in):  ಸಿಎಂ ಬಿಎಸ್ ವೈ ರಾಜೀನಾಮೆ ಸುಳಿವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಸಂಸದ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ, ನನ್ನ ತಂದೆಗೆ  ಕೊಟ್ಟಿರುವ ಜವಾಬ್ದಾರಿ ಸರಿಯಾಗಿ ನಿಭಾಯಿಸಿದ್ದಾರೆ. ಬಿಎಸ್ ವೈಗೆ ಪಕ್ಷ ಎಲ್ಲವನ್ನೂ ನೀಡಿದೆ.  ಬಿಜೆಪಿಯಲ್ಲಿ ಇದಕ್ಕಿಂತ ಇನ್ನೇನು ಬೇಕು ಎಂದು ಸಿಎಂ ಬಿಎಸ್ ವೈ ಪುತ್ರ ಹಾಗೂ ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ.jk

ಈ ಕುರಿತು ಮಾತನಾಡಿದ ಸಿಎಂ ಪುತ್ರ ಬಿವೈ ರಾಘವೇಂದ್ರ,  ನಮ್ಮ ತಂದೆಗೆ  ಕೊಟ್ಟಿರುವ ಜವಾಬ್ದಾರಿ ಸರಿಯಾಗಿ ನಿಭಾಯಿಸಿದ್ದಾರೆ.  ಅವರಿಗೆ ಆಷಾಢ ಶ್ರಾವಣ ಮಾಸ ಯಾವುದು ಇಲ್ಲ . ಅವರಿಗೆ ಎಲ್ಲವೂ ಹೋರಾಟವೇ.  ಹೈಕಮಾಂಢ್ ನಿರ್ದಾರಕ್ಕೆ ನನ್ನ ತಂದೆ ಬದ್ಧರಾಗುತ್ತಾರೆ. ನನಗೆ ಸಂಸದ ಸ್ಥಾನ. ವಿಜಯೇಂಧ್ರಗೆ ಉಪಾಧ್ಯಕ್ಷ ಸ್ಥಾನ. ಬಿಎಸ್ ವೈ ಅವರಿಗೆ ಹೈಕಮಾಂಢ್ ಎಲ್ಲವನ್ನೂ ನೀಡಿದೆ. ಬಿಜೆಪಿಯಲ್ಲಿ ಇದಕ್ಕಿಂತ ಇನ್ನೇನು ಬೇಕು ಎಂದು ಹೇಳಿದರು.

ಬಿಎಸ್ ವೈ ಬಿಜೆಪಿಯಲ್ಲಿ ಇದ್ದು ಪಕ್ಷವನ್ನ ಬೆಳೆಸುತ್ತಾರೆ. ಬಿಎಸ್ ವೈ ಶಿಕಾರಿಪುರ ಕ್ಷೇತ್ರದಲ್ಲೇ ಸ್ಪರ್ಧಿಸುತ್ತಾರೆ. ಬಿಎಸ್ ವೈಗೆ ಕೆಲವರು ನೋವು ಮಾಡಿದರು. ಹೀಗಾಗಿ ಬಿಜೆಪಿ ಬಿಟ್ಟು ಹೊಸ ಪಕ್ಷ ಕಟ್ಟಿದರು. ನಂತರ ಮತ್ತೆ ಅವರು ಪಕ್ಷಕ್ಕೆ ಬಂದು ಅಧಿಕಾರಕ್ಕೆ ತಂದರು ಎಂದು ಬಿವೈ ರಾಘವೇಂದ್ರ ತಿಳಿಸಿದರು.

Key words:  party –given- everything- BJP – BY Raghavendra