ಪ್ರೇಮಿಗಳ ಮದುವೆಗೆ ಪೋಷಕರ ವಿರೋಧ : ಮಚ್ಚಿನೇಟು, ಯುವತಿಯ ನಾಲ್ಕು ಬೆರಳು ಕಟ್

ಚಾಮರಾಜನಗರ,ಡಿಸೆಂಬರ್,05,2020(www.justkannada.in) : ಪ್ರೀತಿಸಿ ಮದುವೆಯಾಗಲು ಸಿದ್ಧವಾಗಿದ್ದ ಜೋಡಿಗೆ ಮಚ್ಚಿನೇಟು ಯುವತಿಯ 4 ಬೆರಳು ಕಟ್.logo-justkannada-mysore

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಿ.ಜಿ.ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಸತ್ಯ ಹಾಗೂ ಧನಲಕ್ಷ್ಮಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ,

ಈ ವಿಚಾರ ಯುವತಿ ಪೋಷಕರಿಗೆ ತಿಳಿದು ಅವರು ವಿರೋಧಿಸಿದ್ದರು. ಮನೆಯವರ ತೀವ್ರ ವಿರೋಧದ ನಡುವೆಯೂ ಪ್ರೇಮಿಗಳು ಮದುವೆಗೆ ಮುಂದಾಗಿದ್ದರು. ಇದರಿಂದ ಸಿಟ್ಟಿಗೆದ್ದ ಮನೆಯವರು ಆಕೆಯ ತಂದೆ ಹಾಗೂ ಅಣ್ಣನೇ ಗಂಭೀರ ಹಲ್ಲೆ ಮಾಡಿದ್ದಾರೆ.

ಗ್ರಾಮದ ಮೆಡಿಕಲ್ ಸ್ಟೋರ್ ಮುಂಭಾಗದಲ್ಲಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಧನಲಕ್ಷ್ಮೀ ಮೇಲೆ ಹಲ್ಲೆ ಮಾಡಲು ಆಕೆಯ ತಂದೆ ಶಿವಸ್ವಾಮಿ ಹಾಗೂ ಅಣ್ಣ ಮಹೇಂದ್ರ ಮಚ್ಚು, ಕುಡಗೋಲು ಹಿಡಿದು ಬಂದಿದ್ದರು. ಅಲ್ಲದೆ ಮೆಡಿಕಲ್ ಮುಂಭಾಗದಲ್ಲಿದ್ದ ಧನಲಕ್ಷ್ಮಿ ಮೇಲೆ ಕುಡುಗೋಲಿನಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ.

 

ಹಲ್ಲೆಯ ಪರಿಣಾಮ ಯುವತಿ ಕೈಯ 4 ಬೆರಳುಗಳೇ ಕಟ್ ಆಗಿವೆ. ಸದ್ಯ ಯುವತಿ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲದೆ ಪ್ರಾಣ ರಕ್ಷಿಸುವಂತೆ ಅಳಲು ತೋಡಿಕೊಂಡಿದ್ದಾಳೆ. ಘಟನೆ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

key words : Parental-Opposition-Valentine’s-Marriage-Favorite-
Four-finger-cut-young-woman