ಓದು ಬೇಡ ಮದ್ವೆಯಾಗು ಎಂದ ಪೋಷಕರು: ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ

ಮೈಸೂರು, ಡಿಸೆಂಬರ್ 20, 2020 (www.justkannada.in): ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯ ರಕ್ಷಣೆಯನ್ನು ರಕ್ಷಿಸಲಾಗಿದೆ.

ಪಟ್ಟಣದ ಗುಂಜನರಸಿಂಹ ಸ್ವಾಮಿ ದೇವಸ್ಥಾನದ ಕಪಿಲಾ ನದಿಯ ಬಳಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ. ಈಕೆ ಚಾಮರಾಜನಗರದ ಮೂಲದ 15 ವರ್ಷದ ಬಾಲಕಿ.

ಸ್ಥಳೀಯ ತೆಪ್ಪವನ್ನು ನಡೆಸುವವರು ರಕ್ಷಿಸಿದ್ದಾರೆ. ಸಮಾಜ ಸೇವಕ ಮಾದೇಶ್ ನೆರವಿನೊಂದಿಗೆ ಪೊಲೀಸ್ ಠಾಣೆಗೆ ಕರೆತಂದು ಬಾಲಕಿಯ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ತಂದೆ ತಾಯಿಗಳು ಮದುವೆಗೆ ಒತ್ತಾಯಿಸಿದ್ದರಿಂದ ಮನೆಯಿಂದ ಓಡಿ ಬಂದು ಆತ್ಮಹತ್ಯೆಗೆ ಪ್ರಯತ್ನಿಸುವುದಾಗಿ ಬಾಲಕಿ ಹೇಳಿದ್ದಾಳೆ. ಮದುವೆ ನಿರಾಕರಿಸಿ ವಿದ್ಯಾಭ್ಯಾಸ ಮಾಡುವ ಹಂಬಲವನ್ನು ಬಾಲಕಿ ವ್ಯಕ್ತಪಡಿಸಿದ್ದಾಳೆ.

ತಂದೆತಾಯಿಗಳನ್ನು ಕರೆಯಿಸಿ ತಂದೆತಾಯಿಗಳಿಗೆ ತಿಳಿ ಹೇಳಿ ಬಾಲಕಿಯ ಮನವೊಲಿಸಿ ಪೋಷಕರ ಜೊತೆ ಕಳಿಸಲಾಗಿದೆ.