Sunday, September 20, 2026

BDA Apartments

Home Front Page ಪಂಚರತ್ನ ಯೋಜನೆ ಪ್ರತಿ ಕುಟುಂಬಕ್ಕೂ ಉಪಯುಕ್ತ: ಜೆಡಿಎಸ್ ಅಧಿಕಾರಕ್ಕೆ ಬರುವುದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ-ಹೆಚ್.ಡಿ ಕುಮಾರಸ್ವಾಮಿ.

ಪಂಚರತ್ನ ಯೋಜನೆ ಪ್ರತಿ ಕುಟುಂಬಕ್ಕೂ ಉಪಯುಕ್ತ: ಜೆಡಿಎಸ್ ಅಧಿಕಾರಕ್ಕೆ ಬರುವುದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ-ಹೆಚ್.ಡಿ ಕುಮಾರಸ್ವಾಮಿ.

ತುಮಕೂರು,ಮೇ,4,2023(www.justkannada.in): ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪಂಚರತ್ನ ಯೋಜನೆ ಜಾರಿಯಾದರೇ ಪ್ರತಿ ಕುಟುಂಬಕ್ಕೂ ಉಪಯುಕ್ತವಾಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನುಡಿದರು.

ತುಮಕೂರಿನ ಶಿರಾದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ನಾನು ಈಗಾಗಲೇ 106 ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ ಪಂಚರತ್ನ ಯೋಜನೆ ಜಾರಿಯಾದರೇ ಪ್ರತಿ ಕುಟುಂಬಕ್ಕೂ ಉಪಯುಕ್ತವಾಗಲಿದೆ. ಪ್ರತಿಯೊಂದು ಕುಟುಂಬದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು.  50 ಲಕ್ಷ ರೂ. ವೆಚ್ಚದ ಖಾಯಿಲೆಗೂ ಸರ್ಕಾರವೇ ಹಣ ಭರಿಸುವ ಯೋಜನೆ, ರಸಗೊಬ್ಬರ ಬಿತ್ತನೆ ಬೀಜ ಖರೀದಿಸಲು ಸರ್ಕಾರದಿಂದಲೇ ಕ್ರಮ. ಭೂರಹಿತ ಕುಟುಂಬಗಳಿಗೆ ಮಾಸಿಕ 2 ಸಾವಿರ ರೂ.  ಸ್ತ್ರಿಶಕ್ತಿ ಸಂಘಗಳ ಸಾಲ ಮನ್ನಾಗೆ ಕ್ರಮ.  65 ವರ್ಷ ಮೇಲ್ಪಟ್ಟವರಿಗೆ ಮಾಸಿಕ 5 ಸಾವಿರ ರೂ. ಸಹಾಯಧನ, ವಿಧವೆಯರಿಗೆ ಮಾಸಿಕ 2500 ರೂ.  ಜೆಡಿಎಸ್ ಅಧಿಕಾರಕ್ಕೆ ಬಂದರೇ ವರ್ಷಕ್ಕೆ 5 ಗ್ಯಾಸ್ ಸಿಲಿಂಡರ್ ಉಚಿತ ನೀಡಲಾಗುತ್ತದೆ ಎಂದರು.ಪಂಚರತ್ನ ಯೋಜನೆ ಪ್ರತಿ ಕುಟುಂಬಕ್ಕೂ ಉಪಯುಕ್ತ hdk hdk 1

ಹಾಗೆಯೇ ಪ್ರತಿ ಜಿಲ್ಲೆಯಲ್ಲಿ’ ಪದವಿ ಓದುವ ಹೆಣ್ಣು ಮಕ್ಕಳಿಗೆ ಸ್ಕೂಟಿ ಖರೀದಿಸಲು ಪ್ರೋತ್ಸಾಹಧನ. ಪ್ರತಿ ಜಿಲ್ಲೆಯಲ್ಲಿ 1 ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗುತ್ತದೆ. ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ಜೆಡಿಎಸ್  ಅಧಿಕಾರಕ್ಕೆ ಬರುವುದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words:  Pancharatna Yojana – useful – every family –Former CM- HD Kumaraswamy.