Tuesday, September 15, 2026

BDA Apartments

Home Front Page  ಕಾಂಗ್ರೆಸ್ ತನ್ನ ಪ್ರಣಾಳಿಕೆ ಹಿಂಪಡೆದು, ರಾಜ್ಯದ ಜನತೆ ಬಳಿ ಕ್ಷಮೆ ಕೇಳಲಿ- ಶಾಸಕ ಸಿ.ಟಿ ರವಿ...

 ಕಾಂಗ್ರೆಸ್ ತನ್ನ ಪ್ರಣಾಳಿಕೆ ಹಿಂಪಡೆದು, ರಾಜ್ಯದ ಜನತೆ ಬಳಿ ಕ್ಷಮೆ ಕೇಳಲಿ- ಶಾಸಕ ಸಿ.ಟಿ ರವಿ ಆಗ್ರಹ.

ಚಿಕ್ಕಮಗಳೂರು, ಮೇ,4,2023(www.justkannada.in):  ಭಜರಂಗದಳ ಬ್ಯಾನ್ ಮಾಡುವ ಬಗ್ಗೆ ಉಲ್ಲೇಖಿಸಿರುವ ಹಿನ್ನೆಲೆ ಕಾಂಗ್ರೆಸ್ ತನ್ನ ಪ್ರಣಾಳಿಕೆ ಹಿಂಪಡೆದು, ರಾಜ್ಯದ ಜನತೆ ಬಳಿ ಕ್ಷಮೆ ಕೇಳಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಸಿ.ಟಿ ರವಿ, ತ್ರೇತಾಯುಗದಲ್ಲಿ ಭಜರಂಗಿಯನ್ನು ಕೆಣಕಿದ್ದ ರಾವಣನ ಸರ್ವ ನಾಶವಾದ. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಕ್ಕೆ ಲಂಕೆ ಸುಟ್ಟುಹೋಯ್ತು. ಈಗ ಕಾಂಗ್ರೆಸ್​ ನಾಯಕರು ಬಜರಂಗದಳವನ್ನು ಕೆಣಕಿದ್ದಾರೆ. ಕಾಂಗ್ರೆಸ್ ಅದೇ ಕಾರಣಕ್ಕೆ ರಾಜಕೀಯವಾಗಿ ನಾಶವಾಗುತ್ತದೆ ಎಂದು ಗುಡುಗಿದರು.ಕಾಂಗ್ರೆಸ್ ತನ್ನ ಪ್ರಣಾಳಿಕೆ ಹಿಂಪಡೆದು ct ravi

ಬಜರಂಗದಳ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ರೀತಿ ಪ್ರಕರಣ ಮಾಡಿದ್ಯಾ? ಬಜರಂಗದಳ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಿಸಿಕೊಂಡಿದ್ಯಾ? ಎಂದು ಪ್ರಶ್ನಿಸಿದ ಸಿಟಿ ರವಿ,  ಗೋಹತ್ಯೆ, ಲವ್ ಜಿಹಾದ್ ವಿರುದ್ಧ ಪ್ರತಿಭಟನೆ ಮಾಡಿರಬಹುದು ಅಷ್ಟೇ. ಪ್ರತಿಭಟನೆಯಲ್ಲಿ ಭಾರತ್​ ಮಾತಾಕಿ ಜೈ, ಜೈಶ್ರೀರಾಮ್ ಅಂತಾರೆ, ಕಾಂಗ್ರೆಸ್​ ನಾಯಕರಿಗೆ ಜೈ ಶ್ರೀರಾಮ್ ಅಂದರೆ ಸಹಿಸಿಕೊಳ್ಳಲು ಆಗಲ್ಲ. ಹರ-ಹರ ಮಹಾದೇವ ಎಂದು ಹೇಳಿದರೂ ಸಹಿಸಿಕೊಳ್ಳಲು ಆಗುವುದಿಲ್ಲ. ಭಾರತ್​ ಮಾತಾಕಿ ಜೈ ಅಂದರೆ ಆರ್​​ಎಸ್​ಎಸ್​ನವರಾ ಎಂದು ಕೇಳುತ್ತಾರೆ. ಕಾಂಗ್ರೆಸ್ ​​ನವರದ್ದು ಮಿತಿಮೀರಿದ ಓಲೈಕೆ ರಾಜನೀತಿ ಎಂದು ಕಿಡಿಕಾರಿದರು.

Key words: MLA -CT Ravi – Congress- withdraw – manifesto – apologize – people – state.