Tuesday, September 29, 2026

BDA Apartments

ಪಂಚರತ್ನಯಾತ್ರೆ ವಿರುದ್ಧದ ಅಪಪ್ರಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿ...
Home Front Page ಪಂಚರತ್ನಯಾತ್ರೆ ವಿರುದ್ಧದ ಅಪಪ್ರಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು.

ಪಂಚರತ್ನಯಾತ್ರೆ ವಿರುದ್ಧದ ಅಪಪ್ರಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು.

ಕಲ್ಬುರ್ಗಿ,ಜನವರಿ,12,2023(www,justkannada.in):  ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಸಿದ‍್ಧತೆ ನಡೆಸಿದ್ದು ರಾಜ್ಯಾದ್ಯಂತ ಪಂಚರತ್ನಯಾತ್ರೆ ನಡೆಸುತ್ತಿದೆ. ಈ ಮಧ್ಯೆ ಈ ಯಾತ್ರೆ ಬಗ್ಗೆ ಟೀಕಿಸಿದವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಪಂಚರತ್ನಯಾತ್ರೆಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಕೆಲವೇ ಜಿಲ್ಲೆಗಳಿಗೆ ಸೀಮಿತ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜೆಡಿಎಸ್ ಕಲ್ಯಾಣ ಕಿತ್ತೂರು ಭಾಗದ ಕರ್ನಾಟಕದಲ್ಲಿ  ಕನಿಷ್ಠ 35 ಸ್ಥಾನಗಳನ್ನ ಗೆಲ್ಲಲಿದೆ. ಬೀದರ್ ನಲ್ಲಿ 7 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.ಪಂಚರತ್ನಯಾತ್ರೆ ವಿರುದ್ಧದ ಅಪಪ್ರಚಾರ hdk hdk 1

Key words: Pancharatna yatra-Former CM -HD Kumaraswamy -kalburgi