ಮಾಜಿ ಸಚಿವ ಜನಾರ್ಧನ ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರ ಅನುಮತಿ.

ಬೆಂಗಳೂರು,ಜನವರಿ,12,2023(www.justkannada.in): ಮಾಜಿ ಸಚಿವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕೊನೆಗೂ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಸಿಬಿಐಗೆ ಅನುಮತಿ ನೀಡಿ ಕರ್ನಾಟಕ ಗೃಹ ಇಲಾಖೆ ಆದೇಶ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದ ಬಳಿಕೆ ಎಚ್ಚೆತ್ತುಕೊಂಡ ಸರ್ಕಾರ, ಅಂತಿಮವಾಗಿ ಇಂದು(ಜನವರಿ 12) ರೆಡ್ಡಿ ಆಸ್ತಿ ಜಪ್ತಿ ಪ್ರತಿಕ್ರಿಯೆಗೆ ಅನುಮತಿ ನೀಡಿದೆ.

ಕಳೆ‌ದ ಆಗಸ್ಟ್ ತಿಂಗಳಲ್ಲೇ ಸಿಬಿಐ ತೆಲಂಗಾಣ, ಆಂಧ್ರಪ್ರದೇಶದಲ್ಲಿನ ಆಸ್ತಿ ಜಪ್ತಿಗೆ ಅನುಮತಿ ಕೇಳಿತ್ತು. ಆದರೆ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಸರ್ಕಾರ  ಅನುಮತಿ ನೀಡಲು ವಿಳಂಬ ಮಾಡಿದ ಹಿನ್ನೆಲೆ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು.

ಈ ಬೆನ್ನಲ್ಲೇ ಇದೀಗ ರಾಜ್ಯ ಗೃಹ ಇಲಾಖೆ ಜನಾರ್ಧನ ರೆಡ್ಡಿ ಆಸ್ತಿ ಜಪ್ತಿ ಪ್ರಕ್ರಿಯೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಸಿಬಿಐಗೆ ಅನುಮತಿ ನೀಡಿ ಗೃಹ ಇಲಾಖೆ ಆದೇಶ ನೀಡಿದ್ದು, ಅನುಮತಿ ನೀಡಿ ಆದೇಶ ನೀಡಿರುವ ಕುರಿತಂತೆ ಹೈಕೋರ್ಟ್​​ಗೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದ್ದಾರೆ.

Key words: Govt -allows- former minister -Janardhan Reddy – confiscate -property.