ಪಾಲಿಕೆಯಿಂದ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಳ : ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಕಿಡಿ

ಮೈಸೂರು,ಏಪ್ರಿಲ್,18,2021(www.justkannada.in) : ಪಾಲಿಕೆಯ ತೆರಿಗೆ ಹೆಚ್ಚಳ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ. ಶೇಕಡಾ 15ರಷ್ಟು ಹೆಚ್ಚುವರಿ ತೆರಿಗೆ ಕಟ್ಟಲು ನಮ್ಮ ವಿರೋಧವಿಲ್ಲ. ಆದರೆ, ಪಾಲಿಕೆ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಳ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಕಿಡಿಕಾರಿದರು.jkಮಹಾನಗರ ಪಾಲಿಕೆಯ ತೆರಿಗೆ ಹೆಚ್ಚಳ ನಿರ್ಧಾರ ವಿಚಾರಕ್ಕೆ ಸಂಬಂಧಿಸಿದಂತೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು.

ಸಭೆಯ ನೇತೃತ್ವವಹಿಸಿ ಮಾತನಾಡಿದ ಅವರು, ಪಾಲಿಕೆಯ ತೆರಿಗೆ ಹೆಚ್ಚಳ ನಿರ್ಧಾರಕ್ಕೆ ಅಸಮಾಧಾನವ್ಯಕ್ತಡಿಸಿದರು. ಕೆಲವು ಕಡೆ ತೆರಿಗೆ ಹೆಚ್ಚಳದ ವ್ಯತ್ಯಾಸ ಶೇಕಡಾ 15ಕ್ಕಿಂತಲೂ ಹೆಚ್ಚಿನ ವ್ಯತ್ಯಾಸವಿದೆ. ಪಾಲಿಕೆಯ ಈ ರೀತಿಯ ನಿರ್ಧಾರ ಸರಿಯಲ್ಲ ಎಂದು ಆಕ್ಷೇಪವ್ಯಕ್ತಪಡಿಸಿದರು.

ಕಾರ್ಪೋರೇಷನ್ ಆ್ಯಕ್ಟ್ ಪ್ರಕಾರ ಮೂರು ವರ್ಷಗಳಿಗೊಮ್ಮೆ ತೆರಿಗೆ ಹೆಚ್ಚಿಸಲು ಅವಕಾಶವಿದೆ. ಕಳೆದ 20 ವರ್ಷಗಳಿಂದಲೂ ಮೈಸೂರಿನ ನಾಗರೀಕರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಲೇ ಬಂದಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಪಾಲಿಕೆ ತೆರಿಗೆ ಹೆಚ್ಚಳ ನಿರ್ಧಾರಕ್ಕೆ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಮೇಯರ್, ಪಾಲಿಕೆ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಯಿತು.palike-Unscientifically-Tax-Increase-KPCC-spokesman-M.Lakshan

 

ಸಭೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ನಗರ ಪಾಲಿಕೆ ಸದಸ್ಯರಾದ ಅಯೂಬ್ ಖಾನ್, ಪುಷ್ಪಲತಾ ಜಗನ್ನಾಥ್ ಸೇರಿದಂತೆ ಸಾರ್ವಜನಿಕರು ಭಾಗಿಯಾಗಿದ್ದರು.

key words : palike-Unscientifically-Tax-Increase-KPCC-spokesman-M.Lakshan