ಆರ್ಥಿಕ ಬಲ ತುಂಬುವುದೇ ನಮ್ಮ ಗುರಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ನವೆಂಬರ್,14,2020(www.justkannada.in) : ಸಹಕಾರ ವ್ಯವಸ್ಥೆ ಒಂದು ಆರ್ಥಿಕ ವ್ಯವಸ್ಥೆಯಾಗಿದೆ. ಇದು ಆರ್ಥಿಕವಾಗಿ ಅಬಲರಾದವರ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಈ ಬಾರಿ ಸಪ್ತಾಹದ ಧ್ಯೇಯ “ಕೊರೋನ ಸೋಂಕು-ಆತ್ಮನಿರ್ಭರ ಭಾರತ-ಸಹಕಾರ ಸಂಸ್ಥೆಗಳು ಎಂಬುದಾಗಿದೆ. ನಾಗರಿಕರಿಗೆ ಸ್ಪಂದಿಸಿ ಆರ್ಥಿಕ ಬಲ ತುಂಬುವುದೇ ನಮ್ಮ ಗುರಿ ಎಂದು ಮುಖ್ಯಮಂತ್ರಿಯವರಾದ ಬಿ.ಎಸ್.ಯಡಿಯೂರಪ್ಪ ಹೇಳಿದರು.kannada-journalist-media-fourth-estate-under-lossವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ಆಯೋಜಿಸಲಾಗಿದ್ದ ‘’67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ಕಾರ್ಯಕ್ರಮ’’ವನ್ನು ಉದ್ಘಾಟಿಸಿ ಅವರು ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಈಗಾಗಲೇ ರಾಜ್ಯದ ಸಹಕಾರ ಇಲಾಖೆ ಮತ್ತು  ಸಹಕಾರ ಸಂಸ್ಥೆಗಳು ಬಡಜನರಿಗೆ, ವಲಸೆ ಕಾರ್ಮಿಕರಿಗೆ, ದುರ್ಬಲ ವರ್ಗಗಳ ಜನರಿಗೆ ಆಹಾರ ವಿತರಣೆ, ದವಸಧಾನ್ಯಗಳ ವಿತರಣೆ, ತರಕಾರಿ ವಿತರಣೆಗೆ ಸಹಾಯ ಮಾಡಿವೆ ಎಂದರು.

ಭಾರತದಲ್ಲಿ ಸಹಕಾರಿಗಳು ನಿಷ್ಠೆಯಿಂದ ಪ್ರತಿವರ್ಷ ಸಪ್ತಾಹವನ್ನು ಆಚರಿಸಿಕೊಂಡು ಬಂದಿದ್ದಾರೆ. ಮುಖ್ಯಮಂತ್ರಿಗಳ ಕೋವಿಡ್-19ರ ಪರಿಹಾರ ನಿಧಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಮುಂದಾಳತ್ವದಲ್ಲಿ 53 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿರುವುದಕ್ಕೆ ನಾನು ವೈಯಕ್ತಿಕವಾಗಿ ಮತ್ತು ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.Our-goal-strengthen-economy-Chief-Minister-B.S. Yeddyurappa

ಸಹಕಾರ ಸಚಿವ ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ರಾಜ್ಯದ 42,524 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳಂತೆ ಒಟ್ಟು 12.75 ಕೋಟಿ ರೂ. ಗಳ ಪ್ರೋತ್ಸಾಹಧನವನ್ನು ಸಹಕಾರ ಸಂಸ್ಥೆಗಳು ವಿತರಿಸಿರುವುದು ಕೂಡ ಇಡೀ ದೇಶಕ್ಕೆ ಮಾದರಿ ಎನಿಸಿದ್ದು, ಶೇಕಡಾ 100 ರಷ್ಟು ಗುರಿ ಸಾಧನೆ ಮಾಡಿರುವುದು ಕೂಡ ಹೆಮ್ಮೆಯ ವಿಚಾರವಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

 ಆರ್ಥಿಕ ಸ್ವಾವಲಂಬನೆಗೆ ನೆರವು

ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಕೃಷಿ ಸಾಲ ಒದಗಿಸಲು ಕೇಂದ್ರ ಸರ್ಕಾರವು“Special Liquidity Facility” ಅಡಿಯಲ್ಲಿ 1700 ಕೋಟಿ ರೂ.ಗಳನ್ನು ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕುಗಳಿಗೆ ನೀಡಲಾಗಿದ್ದು, ರೈತರ ಸಂಕಷ್ಟದ ಸಮಯದಲ್ಲಿ ಕೃಷಿಗೆ ಅವಶ್ಯಕವಾದ ಸಾಲವನ್ನು ಒದಗಿಸಲಾಗಿದೆ. ಇದರಿಂದ ಸಹಕಾರ ಸಂಸ್ಥೆಗಳ ಸದಸ್ಯರುಗಳು ಕಿಸಾನ್ ಕ್ರೆಡಿಟ್ಕಾರ್ಡ್ (ರೂಪೇಕಾರ್ಡ್) ಮೂಲಕ ಆರ್ಥಿಕ ನೆರವು ಪಡೆದು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗಲಿದೆ ಎಂದು ಹೇಳಿದರು.

 ಆರ್ಥಿಕ ಸ್ಪಂದನ ಮೂಲಕ 39,600 ಕೋಟಿ ರೂ. ಸಾಲ

Our-goal-strengthen-economy-Chief-Minister-B.S. Yeddyurappa

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ಆರ್ಥಿಕವಾಗಿ ಅಬಲರಾದವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ 20 ಲಕ್ಷ ಕೋಟಿ ರೂ.ಗಳ ಬೃಹತ್ ಮೊತ್ತದ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ.

ಈಗಾಗಲೇ ಸಹಕಾರ ಇಲಾಖೆಯ ಮೂಲಕ 39,600 ಕೋಟಿ ರೂ.ಗಳನ್ನು “ಆರ್ಥಿಕ ಸ್ಪಂದನ”ಕಾರ್ಯಕ್ರಮದ ಮೂಲಕ ಸಚಿವ ಸೋಮಶೇಖರ್ ಅವರು ರಾಜ್ಯಾದ್ಯಂತ ಸಂಚರಿಸಿ ರೈತರು, ಸಾಮಾನ್ಯಜನರು, ಮೀನುಗಾರರು, ಹೈನುಗಾರರು ಸೇರಿದಂತೆ ವಿವಿಧ ವಲಯಗಳ ಜನರಿಗೆ ಸಾಲ ವಿತರಣೆ ಮಾಡಿರುವುದು ಕೂಡ ಅತ್ಯಂತ ಸಂತೋಷದ ವಿಚಾರವಾಗಿದೆ. ರಾಜ್ಯ ಸರ್ಕಾರ ಸಹಕಾರ ವಲಯಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಆತ್ಮನಿರ್ಭರ ಪ್ಯಾಕೇಜ್ಅಡಿಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಣೆ ಮಾಡಿ, ರೈತಉತ್ಪಾದಕ ಸಂಸ್ಥೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ರೂ.4525 ಕೋಟಿಗಳ ಮೊತ್ತವನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ.

ಕೋವಿಡ್-19ರ ಸಂದರ್ಭದಲ್ಲಿ ಹೈನು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಹೈನುಗಾರರಿಗೆ ದುಡಿಯುವ ಬಂಡವಾಳಕ್ಕೆ ಸಾಲವನ್ನು ಒದಗಿಸಲು ಕೆಸಿಸಿ ಡೇರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಕೃಷಿ ಕಾರ್ಮಿಕರಿಗೆ ರೂ. 2 ಲಕ್ಷಗಳವರೆಗಿನ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಲಾಗುತ್ತಿದ್ದು, ತಹಲ್ವರೆಗೆ 1.15 ಲಕ್ಷ ರೈತರಿಗೆ ರೂ. 171 ಕೋಟಿಗಳನ್ನು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಾಲ ಮನ್ನಾ ಯೋಜನೆಯಡಿಯಲ್ಲಿ ರಾಜ್ಯದ 18.32 ಲಕ್ಷ ರೈತರಿಗೆ 8200 ಕೋಟಿ ರೂ.ಗಳ ಸಾಲ ಮನ್ನಾ ಅಂದಾಜಿಸಲಾಗಿದ್ದು, ಇದರಲ್ಲಿ ಹಸಿರು ಪಟ್ಟಿಯಲ್ಲಿರುವ 17.06 ಲಕ್ಷ ರೈತರಿಗೆ 7987.45 ಕೋಟಿ ರೂ.ಗಳು ನಿಗದಿಪಡಿಸಲಾಗಿತ್ತು. ಇದಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ರೂ.5092.32 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Our-goal-strengthen-economy-Chief-Minister-B.S. Yeddyurappa

ಇನ್ನು ಮಹಿಳಾ ಸ್ವಸಹಾಯ ಗುಂಪುಗಳು ಸೇರಿ ವಿವಿಧ ಸ್ವಸಹಾಯ ಗುಂಪುಗಳಿಗೆ ಡಿಸಿಸಿ ಬ್ಯಾಂಕ್,ಪ್ಯಾಕ್ಸ್ ಗಳ ಮೂಲಕ 14098 ಗುಂಪುಗಳಿಗೆ ರೂ.1440.65 ಕೋಟಿಗಳ ಸಾಲ ವಿತರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

English summary…

Economical strengthening of the Cooperative sector is our aim: CM BSY
Bengaluru, Nov. 14, 2020 (www.justkannada.in): “The Cooperative system is an economical system, which has been striving for the economical upliftment of the poor since its inception. The theme of this Cooperative week is “CORONA infection-Atmanirbhar Bharath-Cooperative Societies”. Hence, it is our aim to respond to the people in a positive manner and strengthen their economical position,” said Chief Minister B.S. Yedyurappa.
He participated in the ‘67th All India Cooperative Week 2020’ held at the Banquet Hall in Vidhana Soudha. In his inaugural speech he explained that during the lockdown period the Cooperative Department and cooperative societies in the State had shouldered the huge responsibility of distributing food material, food grains and vegetables to the poor, migrant workers and weaker sections of the society.Our-goal-strengthen-economy-Chief-Minister-B.S. Yeddyurappa
He mentioned that in the leadership of Cooperative Minister S.T. Somashekar the cooperative sector contributed a sum of Rs.53 crore to the COVID-19 relief fund and expressed his thanks on behalf of the government.
Keywords: Cooperative week 2020-CM BSY-Economy

key words : Our-goal-strengthen-economy-Chief-Minister-B.S. Yeddyurappa