ಬೆಂಗಳೂರು, ಜುಲೈ 21, 2025 (www.justkannada.in): ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ನಮ್ಮ ನಾಡು ನಮ್ಮ ಆಳ್ವಿಕೆ (Our Land, Our Rule) ಸಮಗ್ರ ದ್ವಿಭಾಷಾ ನೀತಿಗಾಗಿ ಮಹತ್ವದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ನಡೆಸಿ ಜನರಿಂದ ಬಳಿ ಸಹಿ ಸಂಗ್ರಹಿಸಿತು.
ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನ ಮುಖ್ಯ ದ್ವಾರದ (ಕೆಂಗಲ್ ಹನುಮಂತಯ್ಯ ರಸ್ತೆ- ಡಬಲ್ ರೋಡ್) ಬಳಿ ಈ ಜಾಗೃತಿ ಕಾರ್ಯಕ್ರಮವು ನಡೆದಿದ್ದು, ನಮ್ಮ ನಾಡು ನಮ್ಮ ಆಳ್ವಿಕೆಯ ಸುಮಾರು 30 ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.
ಜಾಗೃತಿ ಭಿತ್ತಿಪತ್ರಗಳ ಪ್ರದರ್ಶನ ಮೂಲಕ ಸ್ವಯಂ ಸೇವಕರು ಅಭಿಯಾನ ನಡೆಸಿದ್ದು, ದ್ವಿಭಾಷಾ ವಿಧಾನದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ನೂರಾರು ನಾಗರಿಕರೊಂದಿಗೆ ಸಂವಾದ ನಡೆಸಿದರು. ಈಗಾಗಲೇ ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿ ಸಹಿಸಂಗ್ರಹ ನಡೆಸುತ್ತಿರುವ ನಮ್ಮ ನಾಡು ನಮ್ಮ ಆಳ್ವಿಕೆಯ ತಂಡವು ಕೇವಲ ಮೂರುವರೆ ಗಂಟೆಗಳಲ್ಲಿ 1000 ಸಹಿಗಳನ್ನು ಯಶಸ್ವಿಯಾಗಿ ಸಂಗ್ರಹಿಸಿದೆ.
ತಮ್ಮ ಹೋರಾಟ ಕುರಿತು ಪ್ರತಿಕ್ರಿಯಿಸಿದ ನಮ್ಮ ನಾಡು ನಮ್ಮ ಆಳ್ವಿಕೆಯ ಸಂಚಾಲಕರು, “ಲಾಲ್‌ಬಾಗ್‌ನಲ್ಲಿ ಜಮಾಯಿಸಿದ ಜನಸಮೂಹವು ಸಮತೋಲಿತ ಮತ್ತು ಸಮಗ್ರ ಭಾಷಾ ನೀತಿಗಾಗಿ ಸಾರ್ವಜನಿಕರ ಆಶಯಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಸಕ್ರಿಯ ಭಾಗವಹಿಸುವಿಕೆ ಮತ್ತು ನಾವು ನಡೆಸಿದ ಅನೇಕ ಅರ್ಥಪೂರ್ಣ ಸಂಭಾಷಣೆಗಳಿಂದ ನಾವು ಹೆಚ್ಚು ಉತ್ತೇಜಿತರಾಗಿದ್ದೇವೆ. ಕನ್ನಡ ಮತ್ತು ಇತರ ಭಾಷೆಗಳು ಅಭಿವೃದ್ಧಿ ಹೊಂದಲು ಮತ್ತು ಎಲ್ಲರಿಗೂ ಅವಕಾಶಗಳನ್ನು ಸೃಷ್ಟಿಸಲು ಇದು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ತಿಳಿಸಿದರು.
ಕಳೆದ ವರ್ಷ ಪ್ರಾರಂಭವಾದ ನಮ್ಮ ನಾಡು ನಮ್ಮ ಆಳ್ವಿಕೆಯ ಈ ಹೋರಾಟವು ಬೆಂಗಳೂರು ಮತ್ತು ಧಾರವಾಡದಲ್ಲಿ ಯಶಸ್ವಿ ಸಾರ್ವಜನಿಕ ಸಭೆಗಳು ಸೇರಿದಂತೆ ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿದೆ. ರಾಜ್ಯ ಶಾಲಾ ಪಠ್ಯಕ್ರಮದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಲು ನಿರ್ದಿಷ್ಟವಾಗಿ ವಕಾಲತ್ತು ವಹಿಸುವ ಆನ್‌ಲೈನ್ ಅರ್ಜಿಯು ಈಗ 50,000 ಕ್ಕೂ ಹೆಚ್ಚು ಸಹಿಗಳನ್ನು ದಾಟಿದೆ. ಇದು ವ್ಯಾಪಕ ಸಾರ್ವಜನಿಕ ಅನುಮೋದನೆಯನ್ನು ಪ್ರತಿಬಿಂಬಿಸುತ್ತದೆ. ಅರ್ಜಿಯ ಪ್ರಗತಿ ಮತ್ತು ನಾಗರಿಕರ ಸಾಮೂಹಿಕ ಧ್ವನಿಯನ್ನು ಈಗಾಗಲೇ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಕ್ಷಣದ ಗಮನ ಮತ್ತು ಕ್ರಮಕ್ಕಾಗಿ ಔಪಚಾರಿಕವಾಗಿ ಸಲ್ಲಿಸಲಾಗಿದೆ.
Key words: ‘Our Country, Our Rule’, bilingual policy, Awareness, people